ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ.
modi-delhi-metro-650_650x400_51429938703
ಮೋದಿ ಅವರು ಧೌಲಾ ಕೌನ್ ನಿಂದ ದ್ವಾರಕಾವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಪ್ರಕಟಿಸಿದ್ದಾರೆ. “ಪ್ರಯಾಣವು ಬಹಳ ಚೆನ್ನಾಗಿತ್ತು. ದೆಹಲಿ ಮೆಟ್ರೋಗೆ ಧನ್ಯವಾದಗಳು. ಶ್ರೀಧರನ್ ಅವರಿಗೆ ಧನ್ಯವಾದಗಳು” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ “ಶ್ರೀಧರನ್ ಅವರು ಮೆಟ್ರೋ ಅನುಭವದ ಬಗ್ಗೆ ನನಗೆ ಯಾವಾಗಲೂ ಹೇಳುತ್ತಿದ್ದರು. ದ್ವಾರಕಾಗೆ ಹೋಗಬೇಕಾದರೆ ನನಗೆ ಇಂದು ಈ ಅನುಭವ ಸಿಕ್ಕಿತು” ಎಂದಿದ್ದಾರೆ ಮೋದಿ.
ಮಾಜಿ ದೆಹಲಿ ಮೆಟ್ರೋ ಅಧ್ಯಕ್ಷ ಇ ಶ್ರೀಧರನ್ ಅವರನ್ನು ‘ಮೆಟ್ರೋ ಮನುಷ್ಯ’ ಎಂದೇ ಕರೆಯಲಾಗುತ್ತದೆ.

By suddi9

Leave a Reply

Your email address will not be published. Required fields are marked *