ಬಂಟ್ವಾಳ: ದ.ಕ.ಜಿಲ್ಲೆಯ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಎನ್.ಎಚ್. ರಸ್ತೆಯಲ್ಲಿ ಸೇತುವೆಯ ಬದಿಯಲ್ಲಿ ಪುಟ್‍ಪಾತ್‍ನಲ್ಲಿ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್‍ಗಳು ಜಖಂಗೊಂಡು ಸುಮಾರು 3 ಮೀಟರ್‍ನಷ್ಟು ಪುಟ್‍ಪಾತ್ ಬಿರುಕು ಬಿಟ್ಟಿದ್ದು ನಡೆದುಕೊಂಡು ಹೋಗುವ ಪಾದಚಾರಿಗಳು ಕಣ್ತಪ್ಪಿ ಆಕಸ್ಮಿಕವಾಗಿ ಬದಿಗೆ ಸರಿದರೆ ರೈಲ್ವೆ ಟ್ರ್ಯಾಕ್ ರಸ್ತೆಗೆ ಬೀಳುವ ಪರಿಸ್ಥಿತಿ ಉದ್ಭವಿಸಿದೆ. ಕಳೆದ 6 ತಿಂಗಳಿನಿಂದ ಇದೇ ಪರಿಸ್ಥಿತಿ ಇದ್ದರೂ ಸಹ ಸದ್ಯ ಕಬ್ಬಿಣದ ತಗಡನ್ನು ಹಾಕಲಾಗಿದೆ. ಇದನ್ನು ಯಾರಾದರೂ ತೆಗೆದರೆ ಪಾದಚಾರಿಗಳಿಗೆ ಸಾವು ಕಟ್ಟಿಟ್ಟ ಬುತ್ತಿ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಬಗ್ಗೆ ಪ್ರಚಾರ ಮಾಡಿದರೆ ಸಾಲದು. ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆ ಬಗ್ಗೆ ಹೆದ್ದಾರಿ ಅಧಿಕಾರಿಗಳಿಂದ ವಿವರಣೆ ಪಡೆದು ಅತ್ಯವಶ್ಯಕ ಗಂಡಾಂತರ ಬಗ್ಗೆ ಪರಾಮರ್ಶೆ ಮಾಡುವುದು ಅತ್ಯವಶ್ಯ. ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಇಂತಹ ಗಂಭೀರ ಸಮಸ್ಯೆಯತ್ತ ಕಡೆ ಗಮನ ಹರಿಸದಿರುವುದು ನಾಗರಿಕರಿಗೆ ನೋವುಂಟು ಮಾಡಿದೆ. ಇನ್ನಾದರೂ ಜಿಲ್ಲಾಧಿಕಾರಿಗಳಾದ ತಾವು ಶೀಘ್ರ ಎಚ್ಚೆತ್ತುಕೊಂಡು ಬಡ ಪಾದಚಾರಿಗಳು ಸತ್ತ ಮೇಲೆ ಪರಿಹಾರ ಘೋಷಿಸುವ ಬದಲು ಮುನ್ನೆಚ್ಚರಿಕೆ ವಹಿಸಿ ಸೂಕ್ತ ಗಮನ ಹರಿಸಿ ಬಿರುಕು ಮುಚ್ಚಿಸುವರೇ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಿಕೊಡಬೇಕೆಂದು ನಾಗರೀಕರು ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿಯ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.