ಮೆಲ್ಕಾರ್:ತಾಲ್ಲೂಕಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಶಾಲಿಮಾ ಕೆ.ಪಿ ಇವರಿಗೆ ಒಟ್ಟು 556 ಅಂಕ ದೊರೆತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಫೀಝ 526 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ದೊರೆತಿದೆ.
ವಾಣಿಜ್ಯ ವಿಭಾಗದಲ್ಲಿ ಸತತ 3 ನೇ ಭಾರಿ ಶೇ. 100 ಫಲಿತಾಂಶ ದಾಖಲಿಸಿದ್ದು, ಹಿಮಾಯತ್ತುನ್ನೀಸ 543, ವಿಜ್ಞಾನ ವಿಭಾಗದಲ್ಲಿ ರಮ್ಲಾತ್ 527 ಅಂಕ ಗಳಿಸಿದ್ದಾರೆ.
ಕಾಲೇಜಿನಿಂದ ಒಟ್ಟು 134 ವಿದ್ಯಾರ್ಥಿನಿಯರ ಪೈಕಿ 12 ಮಂದಿ ವಿಶಿಷ್ಟ ಶ್ರೇಣಿ, 91 ಮಂದಿ ಪ್ರಥಮ ಶ್ರೇಣಿ , 43 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.