ಕೃಷ್ಣರಾಜಪೇಟೆ. ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಬ್ಕಾರಿ ಇಲಾಖೆಯು ಕ್ರಮಕೈಗೊಂಡಿದ್ದು ಅನಿರೀಕ್ಷಿತವಾಗಿ ದಾಳಿಯನ್ನು ನಡೆಸಿ ಅಕ್ರಮ ಮಾರಾಟಗಾರರ ಮೇಲೆ ಕೇಸು ದಾಖಲಿಸಲಾಗುತ್ತಿದೆ ಎಂದು ತಾಲೂಕಿನ ಅಬ್ಕಾರಿ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಹೇಳಿದರು.
ಅವರು ಇಂದು ತಾಲೂಕಿನ ಬೀರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಚಂದುಗೋನಹಳ್ಳಿಯಮ್ಮನವರ ಕ್ಷೇತ್ರದಲ್ಲಿ ನೂತನವಾಗಿ ಆರಂಭವಾದ ಶ್ರೀ ರೇಣುಕಾ ಎಲ್ಲಮ್ಮ ವೈನ್ಸ್ ಸ್ಟೋರ್ ಅನ್ನು ಉದ್ಘಾಟಿಸಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.

13

21-KRPETE-3
21-KRPETE-.03
ತಾಲೂಕಿನ ಗ್ರಾಮಗಳ ಗೂಡಂಗಡಿಗಳಲ್ಲಿ ಹಾಗೂ ದಲಿತ ಕೇರಿಗಳ ಬಳಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಅಂತಹ ಅಂಗಡಿಗಳ ಮೇಲೆ ಧಿಡೀರ್ ದಾಳಿ ನಡೆಸಿದ ಅಬ್ಕಾರಿ ಸಿಬ್ಬಂಧಿಗಳು ಅಕ್ರಮ ಮಧ್ಯವನ್ನು ವಶಪಡಿಸಿಕೊಂಡು ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ಕೇಸು ದಾಖಲಿಸಿ ಕೈಲಿಗೆ ಕಳುಹಿಸುವ ಕೆಲಸವನ್ನು ನಿರ್ದಾಕ್ಷಿಣ್ಯವಾಗಿ ಮಾಡುತ್ತಿದೆ. ಶ್ರೀ ಕ್ಷೇತ್ರವಾದ ಚಂದುಗೋನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಅಕ್ರಮವಾಗಿ ಗೋಣಿ ಚೀಲದಲ್ಲಿ ತುಂಬಿಕೊಂಡು ಮಧ್ಯ ಮಾರಾಟವನ್ನು ನಿರಂತರವಾಗಿ ಮಾಡಲಾಗುತ್ತಿತ್ತು. ವಾರದ ನಾಲ್ಕು ದಿನಗಳು ಹಾಗೂ ಅಮವಾಸ್ಯೆಯಂದು ವಿಶೇಷವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪರುವನ್ನು ನಡೆಸಿ ಸಾಮೂಹಿಕ ಭೋಜನವನ್ನು ನಡೆಸುವುದರಿಂದ ಭಕ್ತಾಧಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಬ್ಕಾರಿ ಇಲಾಖೆಯು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸಿಎಲ್-7 ಲೈಸೆನ್ಸ್’ನಡಿಯಲ್ಲಿ ಮಧ್ಯ ಮಾರಾಟದಂಗಡಿಯನ್ನು ತೆರೆಯಲು ಅನುಮತಿ ನೀಡಿದೆ. ಸಾರ್ವಜನಿಕರು ಅಬ್ಕಾರಿ ಇಲಾಖೆಯ ಮುದ್ರೆಯಿರುವ ಗುಣಮಟ್ಟದ ಮಧ್ಯವನ್ನು ಮಾತ್ರ ಖರೀದಿಸಬೇಕು. ಅಕ್ರಮವಾಗಿ ನಕಲಿ ಮಧ್ಯವನ್ನು ತಾಲೂಕಿನ ಯಾವುದೇ ಗ್ರಾಮದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಅಬ್ಕಾರಿ ಇಲಾಖೆಗೆ ತಿಳಿಸಬೇಕು. ಅಕ್ರಮ ದಂಧೆಕೋರರು ಎಷ್ಟೇ ಪ್ರಭಾವಶಾಲಿಗಳಾದರೂ ಮಟ್ಟಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟುತ್ತೇವೆ ಎಂದು ಪುಟ್ಟಸ್ವಾಮಿ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಗಡಿಯ ಮಾಲೀಕರಾದ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಟಿ.ಅಣ್ಣಯ್ಯ, ಗಾಡಿಕಿಟ್ಟಣ್ಣ, ಮುಖಂಡರಾದ ಬಾಂಬೆ ಶಿವಕುಮಾರ್, ಪಿಎಲ್ಡಿ ಬ್ಯಾಂಕಿನ ಮಾಜಿಅಧ್ಯಕ್ಷ ಆರ್.ಕೆ.ಬೋರೇಗೌಡ, ತಾ.ಪಂ ಸದಸ್ಯೆ ರೇಣುಕಾಕಿಟ್ಟು, ಜಯರಾಮೇಗೌಡ, ನಂಜುಂಡ, ರಮೇಶ್, ಬಂಡಿಹೊಳೆ ಸುರೇಶ್, ಅಬ್ಕಾರಿ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *