ಬಂಟ್ವಾಳ ; ಸಕಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಬಿ.ಸಿ.ರೋಡಿನ ಬಗ್ಗೆ ಸ್ಥಳೀಯಾಡಳಿತ ಹಾಗೂ ಇಲಾಖೆಗಳ ನಿರ್ಲಕ್ಷ್ಯ ನೀತಿ ಎದ್ದು ಕಾಣುತ್ತಿದೆ. ಬಿ.ಸಿ.ರೋಡು ಕೈಕಂಬದಲ್ಲಿ ಪೊಳಲಿ ರಸ್ತೆಯನ್ನು ಸಂಪರ್ಕಿಸುವಲ್ಲಿ ಚರಂಡಿಯೊಂದರ ನಾಲ್ಕು ಸ್ಲ್ಯಾಬ್ ಗಳು ಮುರಿದು ಚರಂಡಿಯೊಳಗೆ ಬಿದ್ದಿದ್ದು, ರಸ್ತೆ ಮಧ್ಯದಲ್ಲಿಯೇ ಹೊಂಡ ಸೃಷ್ಟಿಯಾಗಿದೆ.

4 (2)

ಕಳೆದ ಜೂ.5 ರಂದು ಈ ಘಟನೆ ನಡೆದಿದೆ. ಆ ಬಳಿಕ ಸದ್ರಿ ರಸ್ತೆಯಲ್ಲಿ ಜಿಲ್ಲಾಧಿಕಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಸಚಿವರು, ಹಿರಿಯ ಅಧಿಕಾರಿಗಳು ಸಂಚರಿಸಿದ್ದಾರೆ, ಆದರೆ ಅವರೆಲ್ಲರೂ ಈ ದುರವಸ್ಥೆಯನ್ನು ದೂರದಿಂದ ನೋಡಿ ಹೋಗುತ್ತಿದ್ದಾರೆಯೇ ವಿನಃ, ಈ ಸಮಸ್ಯೆ ಬಗೆಹರಿಕೆಗೆ ಯಾರೂ ಮುಂದಾಗಿಲ್ಲ. ಬಂಟ್ವಾಳ ಪುರಸಭಾ ಆಡಳಿತ ಈ ಬಗ್ಗೆ ವಿಶೇಷ  ಗಮನ ವಹಿಸಿ, ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ

By suddi9

Leave a Reply

Your email address will not be published. Required fields are marked *