ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ಎಂಬಲ್ಲಿ ಇದೇ 12ರಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಡೊಂಬಯ ಪೂಜಾರಿ ಎಂಬವರ ಪುತ್ರಿ ಗೀತಾ ಎಂಬಾಕೆ ತನ್ನ ಪ್ರಿಯಕರ ಮಣಿಹಳ್ಳ ಸಮೀಪದ ದಡ್ಡಲಕಾಡು ನಿವಾಸಿ ಯೋಗೀಶ ಎಂಬವರೊಂದಿಗೆ ವಿವಾಹವಾಗಿ ಗುರುವಾರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
19btl-Jody
ಬಂಟ್ವಾಳ ತಾಲ್ಲೂಕಿನ ಕೊಡಂಬೆಟ್ಟು ಗ್ರಾಮದ ನಾಲೋಡಿ ನಿವಾಸಿ ಗೀತಾ ಇದೇ 12ರಂದು ವಾಮದಪದವು ಗೇರು ಬೀಜ ಸಂಸ್ಕರಣಾ ಘಟಕಕ್ಕೆ ಕೆಲಸಕ್ಕೆಂದು ಹೋದ ಬಳಿಕ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ದೂರು ಸಲ್ಲಿಸಲಾಗಿದ್ದು, ನಾಪತ್ತೆಯಾಗಿರುವ ಯುವತಿ ಮೊಬೈಲ್ ನಂಬರ್ ಜಾಡು ಹಿಡಿದ ಪೊಲೀಸರು ಜೋಡಿಯನ್ನು ಬೆಳ್ತಂಗಡಿ ತಾಲ್ಲೂಕಿನ ಲಾಯಿಲ ಎಂಬಲ್ಲಿ ಪತ್ತೆ ಹಚ್ಚಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ವಿವಾಹವಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *