ಬಜಪೆ: ಕಿನ್ನಿಗೋಳಿ ಸಮೀಪದ ತೋಕೂರಿನ ತಪೋವನದ ಎಂ ಆರ್ ಪೂಂಜ ಐಟಿಐ ನ ರಾಷ್ತ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ಘಟಕದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ ಹರಿದ್ವಾರ ಮತ್ತು ಮುಲ್ಕಿ ರೋಟರಿ ಕ್ಲಬ್ ಸಹಯೋಗದಲಿ ಜೂನ್ 21 ರ ಮಧ್ಯಾಹ್ನ 3 ರಿಂದ 4.30 ರ ವರೆಗೆ ಐಟಿಐ ನ ಸೆಮಿನಾರ್ ಹಾಲ್ ನಲ್ಲಿ ವಿಶ್ವ ಯೋಗ ದಿನಾಚರಣೆ ಜರಗಲಿದೆ. ಮುಲ್ಕಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎನ್ ಪಿ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಐಟಿಐ ಪ್ರಾಚಾರ್ಯ ವೈ ಎನ್ ಸಾಲ್ಯಾನ್ ವಹಿಸಲಿದ್ದು ಯೋಗ ಶಿಕ್ಷಕ ಕೆಂಚನಕೆರೆ ಜಯ ಮುದ್ದು ಶೆಟ್ಟಿ ಮಾಹಿತಿ ನೀಡಲಿದ್ದು ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೋಯಲ್ ಎಚ್ ಡಿ ಸೋಜ, ದ.ಕ. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್, ಐಟಿಐ ನ ಎನ್‍ಎಸ್‍ಎಸ್ ನ ಯೋಜನಾಧಿಕಾರಿ ರಘುರಾಮ ರಾವ್, ರೊವರ್ಸ್ ಅಧಿಕಾರಿ ಸುರೇಶ್ ಎಸ್, ದಯಾನಂದ ಲಾಗ್ವಾಣ್ ಕರ್ ಮತ್ತು ಸಂಜೀವ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *