ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಬಿ.ಸಿ.ರೋಡ್ನಲ್ಲಿ ಸೋಮವಾರ ಶುಭಾರಂಭಗೊಂಡ ‘ಯುವವಾಹಿನಿ ಭವನ’ ಸಂಘದ ಕಚೇರಿಯನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ಮೂರ್ತೆದಾರರ ಮಹಾ ಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಘಟಕ ಅಧ್ಯಕ್ಷ ರಾಜೇಶ ಸುವರ್ಣ, ಮಾಜಿ ಅಧ್ಯಕ್ಷ ಭುವನೇಶ ಪಚ್ಚಿನಡ್ಕ, ಕೇಂದ್ರ ಸಮಿತಿ ಅಧ್ಯಕ್ಷ ಕೆ.ಪ್ರೇಮನಾಥ್, ಪದ್ಮರಾಜ್ ಕುದ್ರೋಳಿ ಮತ್ತಿತರರು ಇದ್ದರು.
