ಮೂಡುಬಿದರೆ: ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದರೆ, ಪ್ರೆಸ್ ಕ್ಲಬ್ ಆಶ್ರಯದಲ್ಲಿ ಬುಧವಾರ ಸಮಾಜಮಂದಿರದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಕಾರ್ಯಕ್ರಮ ನಡೆಯಿತು.

ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಪತ್ರಕರ್ತನದ್ದು. ಯುವಪತ್ರಕರ್ತರಲ್ಲಿ ನಿರಂತರ ಅಧ್ಯಯನದೊಂದಿಗೆ ಬದ್ಧತೆ, ಪ್ರಾಮಾಣಿಕತೆ ಮುಖ್ಯ. ಅಧುನಿಕ ತಂತ್ರಜ್ಞಾನಗಳ ನಡುವೆಯೂ ರಾಜ್ಯದಲ್ಲಿ 55 ಲಕ್ಷದಷ್ಟು ಪತ್ರಿಕೆಗಳು ಹಾಗೂ 30 ಲಕ್ಷದಷ್ಟು ಮಂದಿಯನ್ನು ಆಕಾಶವಾಣಿ ತಲುಪುತ್ತಿವೆ.
ಮಲ್ಲಿಗೆ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮೂಡುಬಿದರೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ರಾಘವ ಎಸ್ ಶ್ಯಾನುಭಾಗ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಲ್ಲಬೆಟ್ಟು ಶಾಲೆಯ ವಿದ್ಯಾರ್ಥಿ ಮನೀಷ್ ಶೆಟ್ಟಿ ಯೋಗಾಸನ ನಡೆಸಿಕೊಟ್ಟರು.
ರೇಡಿಯೋ ಮಾಸ್ಕೋದ ಮಾಜಿ ಬಾತ್ಮೀದಾರ ಲೇಖಕ ಎಚ್ ಮಹಮ್ಮದ್ ವೇಣೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಸದಸ್ಯ ಧನಂಜಯ ಮೂಡುಬಿದಿರೆ ಸನ್ಮಾನಪತ್ರ ವಾಚಿಸಿದರು. ಸದಸ್ಯರಾದ ಯಶೋಧರ ಬಂಗೇರ, ಪ್ರೇಮಾಶ್ರೀ ಕಲ್ಲಬೆಟ್ಟು, ರಾಘವೆಂದ್ರ ಉಪಸ್ಥಿತರಿದ್ದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ವಂದಿಸಿದರು.
ಯಾವುದೇ ಸಂದರ್ಭದಲ್ಲಿ ಪತ್ರಕರ್ತ ನ್ಯಾಯಾದೀಶನಂತೆ ವತರ್ಿಸಬಾರದು. ಸಾಮಾಜಿಕ ಚಿಂತನೆಯೊಂದಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು.
-ಸದಾನಂದ ಪೆರ್ಲ
ಕಾರ್ಯನಿರ್ವಾಹಕ, ಮಂಗಳೂರು ಆಕಾಶವಾಣಿ