ಸುದ್ದಿ 9 ಬಂಟ್ವಾಳ:
ತಾಲ್ಲೂಕಿನ ಭಂಡಾರಿಬೆಟ್ಟು ಗ್ಯಾರೇಜೊಂದರ ಬಳಿ ವಿವಾಹಿತ ಮಹಿಳೆಯೊಬ್ಬರಿಗೆ ಮಾನಭಂಗ ಯತ್ನ ಮತ್ತು ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಶುಕ್ರವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಹರೀಶ, ಪುರುಷೋತ್ತಮ, ಜನಾರ್ದನ ಮತ್ತು ಸಮೃದ್ಧ್ ಎಂದು ಗುರುತಿಸಲಾಗಿದೆ.
ಇವರು ಇಲ್ಲಿನ ವಿಲ್ಸನ್ ಗ್ಯಾರೇಜಿನ ಮಾಲೀಕನ ಪತ್ನಿಗೆ ಜೀವಬೆದರಿಕೆ ಒಡ್ಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ಸಲ್ಲಿಸಲಾಗಿತ್ತು. ಇದರಿಂದಾಗಿ ಆರೋಪಿಗಳು ಶುಕ್ರವಾರ ಸ್ವತಃ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರಿಗೆ 15ದಿನಗಳ ತನಕ ನ್ಯಾಯಾಂಗ ಬಂಧನ ವಿದಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ