ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪೆರಾಜೆ ಗ್ರಾಮ ಏನಾಜೆ ನಿವಾಸಿ, ಕೆಎಸ್ಆರ್ಟಿಸಿ ನಿವೃತ್ತ ಸಂಚಾರ ನಿಯಂತ್ರಕ ನಾರ್ಣಪ್ಪ ಗೌಡ (80) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಈಚೆಗೆ ನಿಧನರಾದರು.
ಮೃತರಿಗೆ ಪತ್ನಿ, ವಕೀಲ ಉಮೇಶ್ ಕುಮಾರ್ ವೈ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಇವರು ಹಾಸನ ವಿಭಾಗ ಕೆಎಸ್ಆರ್ಟಿಸಿ ಸಿಬ್ಬಂದಿ ಯೂನಿಯನ್ ಮುಖಂಡರಾಗಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘಟನೆಗಳಿಗೆ ಆರ್ಥಿಕವಾಗಿ ಸಹಕರಿಸುತ್ತಿದ್ದರು.