ಸುದ್ದಿ9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಜಾರಂದ ಗುಡ್ಡೆ ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ ಬೇಟಿ ಮಾಡಿ ಮತಯಾಚನೆ ಮಾಡಿದರು.
ಪಕ್ಷದ ಪ್ರಮುಖರಾದ ಪುರುಷ ಎನ್ ಸಾಲಿಯಾನ್, ಮಹೇಶ ಚಂದ್ರಿಗೆ, ರೂಪೇಶ್ ಜ್ಯೋತಿಗುಡ್ಡೆ, ಪ್ರವೀಣ್ ಜಾರಂದಗುಡ್ಡೆ, ದಯಾನಂದ ಜಾರಂದಗುಡ್ಡೆ, ಲಕ್ಷಣ ಕಂಜತ್ತೂರು, ಶಿವರಾಂ ಪೆರಿಯೋಡಿಬೀಡು ಉಪಸ್ಥಿತರಿದ್ದರು