ಮೂಡುಬಿದಿರೆಯಲ್ಲಿನಗರ ಪ್ರಾಧಿಕಾರದ “ಮಹಾ ಯೋಜನೆ”ಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ತಾತ್ಕಾಲಿಕ ಅನುಮೋದನೆಗೆ ಮೂಡಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಈ ಯೋಜನೆಯು ಅಸ್ತು ಆದರೆ ಮೂಡುಬಿದಿರೆ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ.


ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಈಗಾಗಲೇ ಮೂಡುಬಿದಿರೆ ಪುರಸಭೆಯಲ್ಲಿ ಬೈಲಾಗಳ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಡೆಸಲಾಗಿದ್ದು ಈ ಬಗ್ಗೆ ಚರ್ಚೆಗಳು ನಡೆದಿವೆ. ಈ ಮಹಾಯೋಜನೆಯಲ್ಲಿ 8 ವಿಭಾಗಗಳು ಸೇರ್ಪಡೆಗೊಳ್ಳಲಿವೆ.
ಈ ಯೋಜನೆಗೆ ಮೂಡುಬಿದಿರೆ ಪುರಸಭೆ ಸಹಿತ ಕೆಲವು ಗ್ರಾ.ಪಂ ವ್ಯಾಪ್ತಿಗಳೂ ಸೇರ್ಪಡೆಗೊಳ್ಳಲಿವೆ. ಹಸುರು ವಲಯ (ಜೀವ ವೈವಿಧ್ಯ ಸಂರಕ್ಷಣಾ ಮತ್ತು ಸೂಕ್ಷ್ಮ ವಲಯ) ಕೈಗಾರಿಕಾ ವಲಯ ( ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆ), ವಸತಿ ವಲಯ ( ರಸ್ತೆಯ ಮಧ್ಯದಿಂದ 21 ಮೀಟರ್ ಅಂತರದಲ್ಲಿ), , ಕೃಷಿ, ವಾಣಿಜ್ಯ, ಸಾರಿಗೆ ಸಂಪರ್ಕ ಸಹಿತ ಒಟ್ಟು 8 ಅಭಿವೃದ್ಧಿ ಯೋಜನೆಗಳು ಈ ಮಹಾ ಯೋಜನೆಯಲ್ಲಿರುತ್ತವೆ.
ಈ ಯೋಜನೆಗೆ ಸುಮಾರು 75 ಸಾವಿರದಷ್ಟು ಜನಸಾಂದ್ರತೆಯ ಅಗತ್ಯವಿದೆ 2011ರಲ್ಲಿ ನಡೆದ ಜನಗಣತಿಯಲ್ಲಿ ಪಂಚಾಯತ್ ವ್ಯಾಪ್ತಿಗಳನ್ನು ಬಿಟ್ಟು 29400 ಜನಸಂಖ್ಯೆ ಇತ್ತು ಇದೀಗ ಮೂರು ಇಂನಿಜಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ಆಳ್ವಾಸ್ ಕಾಲೇಜಿನಲ್ಲಿರುವ ಸುಮಾರು 20 ಸಾವಿರ ವಿದ್ಯಾರ್ಥಿಗಳು ಸಹಿತ ಇತರ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಯಿಂದ ಮೂಡುಬಿದಿರೆಯ ಜನಸಂಖ್ಯೆ ದುಪ್ಪಟ್ಟಾಗಿದೆ. ಅಲ್ಲದೆ ಇದೀಗ ಪುತ್ತಿಗೆ, ಪಡುಮಾನರ್ಾಡು, ಮತ್ತು ಹೊಸಬೆಟ್ಟು ಗ್ರಾ.ಪಂವನ್ನೂ ಈ ಯೋಜನೆಗೆ ಸೇರಿಕೊಳ್ಳಲಾಗಿದೆ.
ಈ ಬಗ್ಗೆ ಮೂಡಾದಿಂದ ಕಳುಹಿಸಿರುವ ತಾತ್ಕಾಲಿಕ ಅನುಮೋದನೆಗೆ ಸರಕಾರವು ಗ್ರೀನ್ ಸಿಗ್ನಲ್ ನೀಡಿದರೆ ಮೂಡುಬಿದಿರೆಗೆ ಮಹಾ ಯೋಜನೆಗಳು ಹರಿದು ಬರುವ ಮೂಲಕ ಮೂಡುಬಿದಿರೆ ನಗರವು ಸುಸಜ್ಜಿತ ಮತ್ತು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಗಮನ ಸೆಳೆಯುವ ಸಿಟಿಯಾಗಿ ಮೂಡಿ ಬರಲಿದೆ.
ಬಾಕ್ಸ್ : ತೊಂದರೆ ಯಾರಿಗೆ..?
ಮೂಡುಬಿದಿರೆಗೆ ಈ ಯೋಜನೆಯು ಬಂದರೆ ಹಲವು ಕಾನೂನುಗಳು ಜಾರಿಗೆ ಬರುತ್ತವೆ ಈ ಮೂಲಕ ಕಾನೂನನ್ನು ಪಾಲಿಸದೆ ಫ್ಲಾಟ್ಗಳನ್ನು ನಿರ್ಮಿಸುವವರಿಗೆ ತೊಂದರೆಯಾಗಲಿದೆ ಮತ್ತು ದೊಡ್ಡ ದೊಡ್ಡ ಫ್ಲಾಟ್ಗಳನ್ನು ನಿರ್ಮಿಸುವವರು ಪರವಾನಿಗೆಯನ್ನು ಬೆಂಗಳೂರಿಗೆ ಹೋಗಿ ಮಾಡಿಕೊಂಡು ಬರಬೇಕಾಗುತ್ತದೆ ಉಳಿದಂತೆ ಬಡ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಮಾತು ಕೇಳಿ ಬಂದಿದೆ.
ಸುರೇಶ್ ಕೋಟ್ಯಾನ್ (ಮೂಡಾ ಅಧ್ಯಕ್ಷ) : ಈ ಯೋಜನೆಯು ಅತ್ಯುತ್ತಮವಾಗಿದ್ದು ಮೂಡುಬಿದಿರೆಯನ್ನು ವೈಜ್ಞಾನಿಕ ಮತ್ತು ಸುಸಜ್ಜಿತವಾಗಿ ಅಭಿವೃದ್ಧಿ ಹೊಂದುವಂತೆ ಮಾಡಲು ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಇದಕ್ಕೆ ಪುರಸಭೆಯ ಕೆಲವು ಸದಸ್ಯರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಪುರಸಭೆಯ ಪ್ಯಾಪ್ತಿಯಲ್ಲಿರುವ ಎಲ್ಲಾ ಒಳ ರಸ್ತೆಗಳನ್ನು ರಸ್ತೆಗಳನ್ನು ಖಾಸಗಿಯಾಗಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಇದರಲ್ಲಿ ಕೆಲವು ಬದಲಾವಣೆಗಳೂ ಆಗಬಹುದು ಈ ಬಗ್ಗೆ ಮೂಡಾ, ಪುರಸಭಾ ಸಭೆಯ ಗಮನಕ್ಕೆ ತಂದು ನಂತರ ಸರಕಾರಕ್ಕೆ ಕಳುಹಿಸಿ ಕೊಡಲಾಗುವುದು ಇದಕ್ಕೂ ಮೊದಲು ಸರಕಾರಿ ಕಛೇರಿಗಳಿಗೂ ತಿಳಿಸುತ್ತೇವೆ ಅಲ್ಲದೆ ಸಾರ್ವಜನಿಕರ ಅಭಿಪ್ರಾಯವನ್ನೂ ತಾವು ಸ್ವೀಕರಿಸುತ್ತೇವೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಈ “ಮಹಾಯೋಜನೆ”ಯನ್ನು ಜಾರಿಗೆ ತರುತ್ತೇವೆ ಎಂದು ನಗರ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ
