ಬಂಟ್ವಾಳ : ಕೃಷಿ ಹಾಗೂ ಋಷಿ ದೇಶದ ಸಂಸ್ಕೃತಿಯ ಎರಡು ಮುಖಗಳಾಗಿದೆ.ದೇಶದ ಬೆನ್ನಲೆಬಾಗಿರುವಕೃಷಿಯಲ್ಲಿ ಯುವಜನಾಂಗ ಭಾಗಿಯವಂತೆಮಾಡಬೇಕಾದ ಅನಿವಾರ್ಯತೆಇದೆ.ಕೃಷಿಕರಲ್ಲಿಆತ್ಮ ವಿಶ್ವಾಸತುಂಬುವ ಕೆಲಸ ಎಲ್ಲರಿಂದನಡೆಯಬೇಕಾಗಿದೆಎಂದುಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರದೇವಾಲಯದ ಮುಂಭಾಗದ ರಥದ ಗದ್ದೆಯಲ್ಲಿ ಆರ್ ಕೆ ಆ ಣ್ಣರ ಮನೆ ವಿಟ್ಲದ ದಶಮಾನೋತ್ಸವ ಪ್ರಯುಕ್ತ ತುಳುವೆರೆ ಕೂಟ ಇಟ್ಟೆಲ್ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಒಡಿಯೂರುಗ್ರಾಮ ವಿಕಾಸ ಸ್ವಸಹಾಯ ಸಂಘ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಶಾಸ್ತಾವು ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಸಮಿತಿಎಡಪದವುಇದರ ಸಹಕಾರದಲ್ಲಿ ನಡೆದ ಆಟಿಟ್ಕೆ ಸರುಡೊಂಜಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿಯ ಅರಿವು ಮೂಡಿಸುವ ಕೆಲಸ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಕೃಷಿ ಉಳಿದಾಗ ಮಾತ್ರ ನಾವೆಲ್ಲರು ಉಳಿಯಲು ಸಾಧ್ಯ.ತುಳು ಸಂಸ್ಕೃತಿಯನ್ನು ಉಳಿಸಿ ಯುವಜನಾಂಗಕ್ಕೆ ನೀಡುವ ಕೆಲಸವಾಗಬೇಕು.ಆಟಿಯಲ್ಲಿಒಂದು ದಿನ ಕೆಸರಿನಲ್ಲಿಇದ್ದರೆ ಸಾಲದು ನಿತ್ಯಕೆಸರಿನಲ್ಲಿದ್ದು, ಕೃಷಿಗೆ ಹೆಚ್ಚು ಆಧ್ಯತೆ ನೀಡಬೇಕಾಗಿದೆಎಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಎಡಪದವು ಶ್ರೀ ಶಾಸ್ತಾನ ಭೂತನಾಥೇಶ್ವರಟ್ರಸ್ಟ್ ಆಡಳಿತ ಮೊಕ್ತೇಸರ ವಿಜಯವಿಠಲನಾಥ ಶೆಟ್ಟಿ ಎಡಪದವು ವಹಿಸಿದ್ದರು.
ಈ ಸಂದರ್ಭ ಪುತ್ತೂರು ರೈಎಸ್ಟೇಟ್ ಅಶೋಕ್ ರೈ ,ವಿಟ್ಲ ಉದ್ಯಮಿ ಸುಬ್ರಾಯ ಪೈ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಆರ್ ಕೆ ಮನೆ ವಿಟ್ಲದ ರಾಜೇಶ್ ವಿಟ್ಲ ಉಪಸ್ಥಿತರಿದ್ದರು.
ತುಳುವೆರೆಕೂಟ ಅರುಣ್ ವಿಟ್ಲಸ್ವಾಗತಿಸಿದರು. ರವಿಪ್ರಕಾಶ್ ವಿಟ್ಲ ವಂದಿಸಿದರು. ಹರೀಶ ಕೆ ಕಾರ್ಯಕ್ರಮ ನಿರೂಪಿಸಿದರು.