ಬಂಟ್ವಾಳ; ಹೆದ್ದಾರಿಯಲ್ಲಿ ವಾಹನಗಳ ಥೈಯಾತಕ..ಥೈಯಾತಕ.. ಸವಾರರು ಪ್ರಯಾಣಿಕರ ಗತಿ ನರಕ… ಹೌದು ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀಮಳೆಗೆ ರಾಷ್ಟ್ರೀಯ ಹೆದ್ದಾರಿ ಯ ಲ್ಲಿ ಬೃಹತ್ ಆಕಾರದ ಹೊಂಡಗಳು ಉಂಟಾಗಿದ್ದು, ಹೆದ್ದಾರಿ ಪ್ರಯಾಣ ದುಸ್ತರವಾಗುತ್ತಿದೆ. ಹಾಗಾಗಿ ಈ ರಸ್ತೆಯಲ್ಲಿ ಪಯಣಿಸುವ ಎಲ್ಲಾ ವಾಹನಗಳಿಗೆ ಥೈಯಾಥಕ ವೆಂಬ ನೃತ್ಯ ಅನಿವಾರ್ಯವಾದಂತಿದೆ.

1a

IMG_20150719_145816

ಬಿ.ಸಿ.ರೋಡಿನಿಂದ ತೊಡಗಿ ಮಾಣಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಕಂಡುಬರುವ ಹೊಂಡಗಳು ಪ್ರಾಣಬಲಿಗೆ ಕಾಯುವಂತಿದೆ. ಈ ಹೊಂಡಗಳ ದೆಸೆಯಿಂದಾಗಿ ಹಗಲು ಹೊತ್ತಿನಲ್ಲೂ ರಸ್ತೆ ಹುಡುಕಿಕೊಂಡು ವಾಹನಚಲಾಯಿಸುವುದು ಸವಾರರಿಗೆ ಕಷ್ಟ ಸಾಧ್ಯವಾಗಿದೆ. ಪ್ರಯಾಣಿಕರ ಪಾಡು ಇದರಿಂದ ಹೊರತಾಗಿಲ್ಲ. ವಾಹನಗಳ ಚಕ್ರ ಹೊಂಡಕ್ಕೆ ಬಿದ್ದಾಕ್ಷಣ ಕುಳಿತಲ್ಲೇ ಜಂಪ್ ಮಾಡುವ ಅವಸ್ಥೆ ಒಂದೆಡೆಯಾದರೆ, ಅನಾರೋಗ್ಯದಿಂದ ಇರುವವರಿಗಂತೂ ದೈಹಿಕ ಹಿಂಸೆಯೇ ಸರಿ.

ದ್ವಿಚಕ್ರವಾಹನ ದವರ ಪಾಡನ್ನಂತೂ ಹೇಳಲಾಗದು. ಅಪ್ಪಿ ತಪ್ಪಿ ದ್ವಿಚಕ್ರವಾಹನ ದ ಚಕ್ರ ಹೊಂಡಕ್ಕೆ ಇಳಿಯಿತು ಎಂದಾದಲ್ಲಿ , ಅಪಾಯ ತಪ್ಪಿದಲ್ಲ. ಲಘುವಾಹನಗಳ ಸವಾರರು ಹೊಂಡವನ್ನು ತಪ್ಪಿಸಿ ಹೋಗಲು ಪ್ರಯತ್ನ ಪಡುತ್ತಾರಾದರೂ ವಾಹನಗಳ ಥೈಯಾತಕ ಥೈಯಾತಕ ತಪ್ಪಿಲ್ಲ. ಪ್ರತೀವರ್ಷ ಹೆದ್ದಾರಿಯನ್ನು ನಿರ್ವಹಣೆಮಾಡಬೇಕಾದ ಹೆದ್ದಾರಿ ಇಲಾಖೆ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಇದು ವಾಹನ ಸವಾರರಿಗೆ ಸಂಕಟತಂದಿದೆ. ಇನ್ನು ಈ ಹೆದ್ದಾರಿಯ ಇಕ್ಕೆಲಗಳಲ್ಲಿ ನೀರು ಹರಿಯಲು ಚರಂಡಿಗಳು ಇಲ್ಲದಿರುವುದೇ ಹೆದ್ದಾರಿ ಹೊಂಡಕ್ಕೆ ಕಾರಣವಾಗುತ್ತಿದೆ.

ಬಿ.ಸಿ.ರೋಡಿನಲ್ಲೂ ಅದೇ ದುರವಸ್ಥೆ..!
ಬಂಟ್ವಾಳ ಟ್ರಾಫಿಕ್ ಠಾಣೆ ಆರಂಭಗೊಂಡ ಬಳಿಕ ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತ ದೊರೆತಿದೆ, ಹಲವು ಹೋರಾಟಗಳ ಬಳಿಕ ಸರ್ವೇಸ್ ರಸ್ತೆ ದುರಸ್ತಿಯಾಗಿದೆ. ಆದರೆ ಇಲ್ಲಿನ ರಾಜಮಾರ್ಗದಲ್ಲಿ ರಾರಾಜಿಸುತ್ತಿರುವ ಹೊಂಡಗಳು ಪ್ರಯಾಣದಲ್ಲಿ ಆತಂಕುಂಟುಮಾಡುತ್ತಿದೆ. ಮುಖ್ಯವೃತ್ತದ ಸುತ್ತಮುತ್ತಲಿನ ಹೊಂಡಗಳು ವಾಹನಸವಾರರಿಗೆ ದೊಡ್ಡ ಸಂಕಷ್ ತಂದಿದೆ. ಧರ್ಮಸ್ಥಳ, ಬಂಟ್ವಾಳ ಪೇಟೆ, ಪುತ್ತೂರು-ಉಪ್ಪಿನಂಗಡಿ-ವಿಟ್ಲ, ಪಾಣೆಮಂಗಳೂರು, ಮಂಗಳೂರು, ಬಿ.ಸಿ.ರೋಡು ಪೇಟೆ ಹೀಗೆ ಐದು ರಸ್ತೆಗಳ ಸಂಗಮ ಸ್ಥಳವಾದ ಬಿ.ಸಿ.ರೋಡಿನ ಮುಖ್ಯವೃತ್ತ ಒಂದೊಮ್ಮೆ ಕಸದ ರಾಶಿಯಿಂದ ಸುದ್ದಿಯಾಗಿದ್ದರೆ ಈಗ ಹೊಂಡಗಳಿಂದ ಸುದ್ದಿಯಾಗುತ್ತಿದೆ. ಟ್ರಾಫೀಕ್ ಜಾಮ್ ಗೆ ಮುಕ್ತಿ ನೀಡುವ ಸಲುವಾಗಿ ನಿರ್ಮಾಣಗೊಂಡಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿ ಬಳಿಕ ಇಲ್ಲಿನ ಡಿವೈಡರ್ ಗಳನ್ನು ಕೆಡವಿ ವೃತ್ತ ನಿರ್ಮಿಸಲಾಗಿದೆ. ಜೊತಗೆ ಸರ್ವೇಸ್ ರಸ್ತೆಯ ಸಂಕಟವೂ ತಾತ್ಕಾಕವಾಗಿ ದೂರವಾಗಿದೆ. ಅದೇ ರೀತಿ ಎಲ್ಲಾ ರಸ್ತೆಗಳು ವಾಹನಸಂಚಾರಕ್ಕೆ ಯೋಗ್ಯವಾಗುವಂತೆ ಸ್ಥಳಿಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ಗಮನಹರಿಸಿದರೆ ಒಳಿತು.

By suddi9

Leave a Reply

Your email address will not be published. Required fields are marked *