ಬಂಟ್ವಾಳ : ಬಂಟ್ವಾಳ – ಮೂಡಬಿದಿರೆ ರಸ್ತೆಯ ಅಣ್ಣಳಿಕೆಯಿಂದ ಕರ್ಪೆಯನ್ನು ಸಂಪರ್ಕಿಸುವ ರಸ್ತೆ ಹೊಂಡಗುಂಡಿಗಳಿಂದ ತುಂಬಿ ಕೆಸರುಮಯವಾಗಿ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಜನಪ್ರತಿನಿಗಳನ್ನು ಮತ್ತು ಇಲಾಖಾಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಯಿಲ, ಅರಳ ಮತ್ತು ಕರ್ಪೆ ಗ್ರಾಮಗಳಲ್ಲಿ ಹಾದು ಹೋಗುವ ಸುಮಾರು 8 ಕಿ. ಮೀ. ಉದ್ದದ ಈ ರಸ್ತೆ ಹೊಂಡಗುಂಡಿಗಳಿಂದ ತುಂಬಿದ್ದು ಕಳೆದ ಹಲವಾರು ವರ್ಷಗಳಿಂದ ಮರುಡಾಮರೀಕರಣಗೊಳ್ಳದೆ ಸಂಪೂರ್ಣ ಹಾಳಾಗಿದೆ. ಅಣ್ಣಳಿಕೆಯಿಂದ ಅರಳದ ವರೆಗೆ ಮಾತ್ರ ಏಕೈಕ ಖಾಸಗಿ ಬಸ್ ಸಂಚಾರವಿದ್ದು ಉಳಿದಂತೆ ಅರಳ, ಕರ್ಪೆ ಭಾಗಗಳಿಗೆ ಜನರು ಪ್ರಯಾಣಿಸಲು ಅಟೋ ರಿಕ್ಷಾವನ್ನೇ ಅವಲಂಬಿಸಿದ್ದಾರೆ.
ಆದರೆ ಕೆಟ್ಟು ಹೋದ ಈ ರಸ್ತೆಯಿಂದಾಗಿ ಅಟೋರಿಕ್ಷಾ ಚಾಲಕರು ರಿಕ್ಷಾ ಓಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೊಂಡಗುಂಡಿಗಳಲ್ಲಿ ಎದ್ದುಬಿದ್ದು ರಿಕ್ಷಾ ಚಲಾಯಿಸುತ್ತಿದ್ದು ದುಡಿದ ಹಣವೆಲ್ಲಾ ಗ್ಯಾರೇಜ್ಗೆ ಸರಿಹೋಗುತ್ತದೆ ಎಂದು ರಿಕ್ಷಾ ಚಾಲಕರ ಅಳಲು. ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಪ್ರಯಾಣಿಸಲು ಪರದಾಡುತ್ತಾರೆ. ಆರೋಗ್ಯ ವಿಚಾರಗಳಿಗೆ ಆಸ್ಪತ್ರೆಗೆ ತೆರಳುವವರು, ವೃದ್ಧರು ಈ ರಸ್ತೆಯಲ್ಲಿ ವಾಹನದಲ್ಲಿ ಪ್ರಯಾಣಿಸಲು ಕಷ್ಟವಾಗಿದೆ.
ಸಿದ್ಧಕಟ್ಟೆಯಿಂದ ಕರ್ಪೆ ಸಂಪರ್ಕದ ರಸ್ತೆ ಹದಗೆಟ್ಟಿರುವ ಬಗ್ಗೆ ಆ ಭಾಗದ ಸಾರ್ವಜನಿಕರು ಪ್ರತಿಭಟನೆ ಕೂಡಾ ನಡೆಸಿದ್ದು ಪ್ರಯೋಜನವಾಗಿರಲಿಲ್ಲ . ಈ ನಡುವೆ ಅರಳದಿಂದ ಎರ್ಮಳಪದವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳುತ್ತಿದ್ದು ಈ ರಸ್ತೆ ಅಣ್ಣಳಿಕೆಯನ್ನು ಜೋಡಿಸುತ್ತದೆ. ಇದರಿಂದ ಸಿದ್ಧಕಟ್ಟೆ , ಕರ್ಪೆ , ಅರಳ ಭಾಗದವರಿಗೆ ಮೂಲರಪಟ್ನ ,ಕುಪ್ಪೆಪದವು ಕಡೆ ಸಾಗಲು ಹತ್ತಿರವಾಗುತ್ತದೆ. ಈಗಾಗಲೇ ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಲ್ಲಿ ಈ ರಸ್ತೆ ಆಭಿವೃದ್ಧಿಗೊಳ್ಳುತ್ತಿದ್ದು ಜೊತೆಗೆ ಅಣ್ಣಳಿಕೆಯಿಂದ ಕರ್ಪೆ – ಸಿದ್ಧಕಟ್ಟೆ ರಸ್ತೆ ಅಭಿವೃದ್ಧಿಗೊಂಡಲ್ಲಿ ಸಂಚಾರ ಸುಗಮವಾದೀತು ಎಂದು ಸಾರ್ವಜನಿಕರ ಅನಿಸಿಕೆ. ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಸಾಧ್ಯವಾಗದಿದ್ದರೂ ಕನಿಷ್ಠ ಹೊಂಡಗುಂಡಿಗಳನ್ನಾದರೂ ತುಂಬಿಸಿದಲ್ಲಿ ಪ್ರಯಾಣಿಸಲು ಸಾಧ್ಯ. ಸಂಬಂತ ಜನಪ್ರತಿನಿಗಳು, ಅಕಾರಿಗಳು ಗಮನಿಸಿ ಸ್ಪಂದಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆ ಕೆಟ್ಟು ಹೋಗಿರುವುದು ನಿಜ. ರಸ್ತೆ ಅಭಿವೃದ್ಧಿ ಬಗ್ಗೆ ಸಚಿವ ಬಿ.ರಮಾನಾಥ ರೈ ಅವರ ಗಮನಕ್ಕೆ ತರಲಾಗಿದ್ದು ಈಗಾಗಲೇ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ದೇವಪ್ಪ ಕರ್ಕೇರ , ಗ್ರಾ.ಪಂ.ಸದಸ್ಯರು, ಸಂಗಬೆಟ್ಟು
ಈ ರಸ್ತೆಯ ಹೊಂಡ-ಗುಂಡಿಗಳನ್ನು ಹಲವಾರು ಬಾರಿ ಶ್ರಮದಾನದಿಂದ ದುರಸ್ತಿಗೊಳಿಸಲಾಗಿದೆ. ಆದರೆ ಸಂಪೂರ್ಣ ಮರುಡಾಮರೀಕರಣಗೊಂಡಿಲ್ಲ . ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಅರಳದಿಂದ ಎರ್ಮಳಪದವು ವರೆಗೆ ರಸ್ತೆ ನಿರ್ಮಾ ಣಗೊಳ್ಳುತ್ತಿದೆ. ಈ ರಸ್ತೆಯೊಂದಿಗೆ ಸಿದ್ಧಕಟ್ಟೆ – ಕರ್ಪೆ ರಸ್ತೆ ಮತ್ತು ಅಣ್ಣಳಿಕೆ – ಅರಳ ರಸ್ತೆ ಅಭಿವೃದ್ಧಿಗೊಂಡಲ್ಲಿ ಈ ಭಾಗದವರು ಸುತ್ತುಬಳಸುವುದು ತಪ್ಪುತ್ತದೆ.
-ಲಕ್ಷ್ಮೀಧರ ಶೆಟ್ಟಿ , ಗ್ರಾ.ಪಂ.ಸದಸ್ಯರು, ಅರಳ
ಚಿತ್ರ : ಕಿಶೋರ್, ಪೆರಾಜೆ