ಬಜ್ಪೆ:ಸಮಾಜದ ಬಡವರ ಏಳಿಗೆಗೆ ದುಡಿದ ಗುರುಗಳ ಆದರ್ಶ ಪಾಲಿಸಿ ಎಂದು ಮಾಜಿ ತಾಲೂಕು ಪಂಚಾಯಿತಿ ಅದ್ಯಕ್ಷ ಹರೀಶ್ ಮೂಡುಶೆಡ್ಡೆ ಹೇಳಿದರು.
ಗುರುಪುರ ಬಿಲ್ಲವ ಸಮಾಜ ಸಂಘದ ವತಿಯಿಂದ ಭಾನುವಾರ ನಡೆದ ಸಮಾಜದ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

GUR JULY --21=6
ಬ್ರಹ್ಮಶ್ರೀ ನಾರಾಯಣ ಗುರುಗಳು ಸದಾ ಸಮಾಜದ ಬಡವರ್ಗದ ಜನರ ಏಳಿಗೆಗಾಗಿ ದುಡಿದರು.ವಿಧ್ಯಾರ್ಥಿ ವೇತನ ಪಡೆದ ವಿಧ್ಯಾರ್ಥಿಗಳು ಉತ್ತಮವಾಗಿ ಕಲಿತು,ಮುಂದೊಂದು ದಿನ ನೀವೂ ಕೂಡ ಸಮಾಜದ ಬಡವರ್ಗದ ಜನರಿಗೆ ಸಹಾಯ ಮಾಡುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತೀಯ ಬಿಲ್ಲವ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಮಾತನಾಡಿ ಸಮಾಜದ ಬಡವರ್ಗದ ಜನರ ಬದುಕನ್ನು ಪರಿವರ್ತನೆ ಮಾಡಿ,ಶಕ್ತಿ ತುಂಬಿದ ಗುರುಗಳನ್ನು ಯಾವಾಗಲೂ ಸ್ಮರಿಸಬೇಕು.ಗ್ರಾಮ ಪಂಚಾಯಿತಿ ಮತ್ತು ಇತರ ಸಂಘ ಸಂಸ್ಥೆಗಳಲ್ಲಿ ಚುನಾಯಿತರಾದ ಸದಸ್ಯರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಎಂದರು.
ಈ ಸಂದರ್ಭ ಪ್ರಾಥಮಿಕ,ಪ್ರೌಡ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.ಅಸೌಖ್ಯದಿಂದ ಅಶಕ್ತರಾದ ಹಿರಿಯರಿಗೆ ಸಹಾಯಧನ ನೀಡಲಾಯಿತು.ಗುರುಪುರ ಗ್ರಾಮ ಪಂಚಾಯಿತಿ,ಗುರುಪುರ ವ್ಯವಸಾಯ ಸಹಕಾರಿ ಸಂಘಕ್ಕೆ ಚುನಾಯಿತರಾಗಿ ಆಯ್ಕೆಯಾದ ಸಮಾಜದ ಸದಸ್ಯರನ್ನು ಸನ್ಮಾನಿಸಲಾಯಿತು.ಚಂದ್ರಶೇಖರ್ ಬಳ್ಳಿ ಪ್ರಾಸ್ತಾವಿಕ ಬಾಷಣ ಮಾಡಿ,ದೀಪಕ್ ಬಂಗೇರ ಸ್ವಾಗತಿಸಿ,ಮಾಧವ ಸುವರ್ಣ ವಂದಿಸಿದರು.
ಈ ಸಂದರ್ಭ ಗುರುಪುರ ಬಿಲ್ಲವ ಸಂಘದ ಅದ್ಯಕ್ಷ ಸುಧಾಕರ್ ಅಮೀನ್,ಉಪಾಧ್ಯಕ್ಷ ರಾಜೇಶ್ ಪೂಜಾರಿ,ಕಾರ್ಯದರ್ಶಿ ಮಾಧವ ಸುವರ್ಣ,ಜತೆಕಾರ್ಯದರ್ಶಿ ದೀಪಕ್ ಬಂಗೇರ,ಸಂಘಟನಾ ಕಾರ್ಯದರ್ಶಿ ಡೊಂಬಯ್ಯ ಪೊನ್ನೆಲ,ಕೋಶಧಿಕಾರ ಶೀನಾ ಕೋಟ್ಯಾನ್,ಪದಾಧಿಕಾರಿಗಳಾದ ಚಂದ್ರಶೇಖರ್ ಬಳ್ಳಿ,ದೇವದಾಸ್ ಅಂಚನ್,ಸ್ಪೂರ್ತಿ ಮಹಿಳಾ ಮಂಡಲದ ಅಧ್ಯಕ್ಷೆ ವಿನೋದ ಡಿ.ಅಂಚನ್,ಸಂಘದ ಸದಸ್ಯರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *