ಬಂಟ್ವಾಳ: ಸಮಾಜದಲ್ಲಿ ದೇಶೀಯ ಪರಂಪರೆಗೆ ಪೂರಕವಾಗಿ ಪ್ರತಿಯೊಬ್ಬರು ಕೂಡಾ ಔಷಧೀಯ ಸಸ್ಯಗಳನ್ನು ಬೆಳೆಸಿ ಪೋಷಿಸಿದಾಗ ಪರಿಶುದ್ಧ ವಾತಾವರಣ ಸೃಷ್ಟಿಯಾಗುವುದರ ಜೊತೆಗೆ ಆರೋಗ್ಯ ವೃದ್ಧಿಯೂ ಸಾಧ್ಯವಾಗುತ್ತದೆ ಎಂದು ವಲಯ ಅರನ್ಯಾಧಿಕಾರಿ ಸುಬ್ರಹ್ಮಣೇಶ್ವರ ರಾವ್ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘ ಮತ್ತು ವಲಯ ಅರಣ್ಯ ಇಲಾಖೆ ವತಿಯಿಂದ ಬಿ.ಸಿ.ರೋಡ್ ಸಮೀಪದ ಕೊಡಂಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಔಷಧೀಯ ಸಸ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಅವಶ್ಯ ಫೌಂಡೇಶನ್ ಪ್ರಬಂಧಕ ಸುರೇಂದ್ರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮತ್ತಿತರರು ಶುಭ ಹಾರೈಸಿದರು. ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕಿ ಸುನಿತಾ ಕೆ., ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕೆ., ಉಪಾಧ್ಯಕ್ಷ ಸುಕುಮಾರ್, ಮಾಜಿ ಅಧ್ಯಕ್ಷ ದಯಾನಂದ್ ಬಂಟ್ವಾಳ ಮತ್ತಿತರರು ಇದ್ದರು.