ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಬನ್ನಡ್ಕ ಸೋನ್ಸ್ ಫಾರ್ಮ್ ಪ್ರಗತಿಪರ ಕೃಷಿಕ, ಕೇಂದ್ರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ.ಎಲ್.ಸಿ. ಸೋನ್ಸ್ ಅವರನ್ನು ಶನಿವಾರ ಸಮಾಜಮಂದಿರ ಮಿನಿಹಾಲ್ನಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಮಾರುಕಟ್ಟೆ ಮೌಲ್ಯವರ್ಧನೆಯಿಂದ ಕೃಷಿಕರಿಗೆ ಲಾಭ: ಡಾ.ಸೋನ್ಸ್

ಡಾ.ಸೋನ್ಸ್-ಬೆನಿಟಾ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅವಿಭಜಿತ ಜಿಲ್ಲೆಯ ರೈತರು ಸ್ವಾವಲಂಭನೆಯ ಜೀವನ ಸಾಗಿಸುತ್ತಿದ್ದಾರೆ. ಉತ್ಪಾದನೆ, ಮಾರುಕಟ್ಟೆ ಮೌಲ್ಯವರ್ಧನೆ ಮಾಡಿದಾಗ ಕೃಷಿಯನ್ನು ಲಾಭದಾಯವಾಗಿಸಬಹುದು. ವೈವಿದ್ಯತೆಯೊಂದಿಗೆ ಕೃಷಿ ಮಾಡಿದರೆ ಯುವಜನತೆ ಕೃಷಿಯತ್ತ ಆಕಷರ್ಿತರಾಗುತ್ತಾರೆ. ಕೃಷಿಕ ಹಾಗೂ ಗ್ರಾಹಕರ ಇಬ್ಬರಿಗೂ ಪ್ರಯೋಜನವಾಗುವಂತ ಯೋಜನೆಯನ್ನು ಸಕರ್ಾರ ಮಾಡಬೇಕು. ಸಮಾಜ ಅದನ್ನು ಮುನ್ನಡೆಸಬೇಕು ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರ ರೈತರ ಬೆಳೆಗೆ ದರ ನಿಗದಿ ಮಾಡಬೇಕು. ಜೊತೆಗೆ ಕೃಷಿಯನ್ನು ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸುವಂತ ಯೋಜನೆ ರೂಪಿಸಬೇಕು. ರೈತರು ಲಕ್ಷಾಂತರ ರೂ. ಸಾಲ ಮಾಡಿ ಕೃಷಿ ಮಾಡುವುದಕ್ಕಿಂತ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸುವ ಕುರಿತು ಕಾರ್ಯಪ್ರವೃತ್ತರಾಗಬೇಕು. ರೈತರ ಆತ್ಮಹತ್ಯೆ ಸಾಲಕ್ಕೆ ಪರಿಹಾರವಲ್ಲ. ಆತ ಆತ್ಮಹತ್ಯೆ ಮಾಡಿಕೊಂಡರೆ ಆತನನ್ನೇ ನಂಬಿರುವ ಕುಟುಂಬಸ್ಥರು ಬೀದಿಗೆ ಬರಬೇಕಾಗುತ್ತದೆ ಎಂದರು.
ದ.ಕ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಅಭಿನಂದನಾ ಭಾಷಣದಲ್ಲಿ, ಮೂಡುಬಿದರೆ ಎಂದರೆ ಸೋನ್ಸ್ ಎನ್ನುವ ಮಟ್ಟಿಗೆ ಟ್ರೆಂಡ್ ಉಂಟಾಗಿದೆ. ಪಾರಂಪರಿಕ ಕೃಷಿಯೊಂದಿಗೆ ವಿದೇಶ ತಳಿಗಳನ್ನು ನಮ್ಮ ಮಣ್ಣಿನಲ್ಲಿ ಬೆಳೆಸಿದ ಸಾಧನೆ ಡಾ.ಎಲ್.ಸಿ ಸೋನ್ಸ್ ಅವರಿಗೆ ಸಲ್ಲುತ್ತದೆ. ಸಮಗ್ರ ಕೃಷಿಯ ಚಿಂತನೆಯೊಂದಿಗೆ ಸಂಶೋಧನಾತ್ಮಕ ರೀತಿಯಲ್ಲಿ ಕೃಷಿ ಮಾಡಿದರೆ ಲಾಭದಾಯವಾಗುತ್ತದೆ ಎಂಬುದನ್ನು ತಮ್ಮ ಕಾರ್ಯವೈಖರಿಯ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ನಿಯೋಜಿತ ಅಧ್ಯಕ್ಷ ರಾಜವರ್ಮ ಬೈಲಂಗಡಿ ಉಪಸ್ಥಿತರಿದ್ದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ನಿರ್ಗಮನ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನಂತರಾಜ್ ಹೆರಳೆ ಸನ್ಮಾನ ಪತ್ರ ವಾಚಿಸಿದರು. ಶಿವರಾಮ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.