ಬಂಟ್ವಾಳ : ಮನುಷ್ಯನ ತಾಳ್ಮೆ, ಸಾಮಥ್ರ್ಯ, ಪರಿಶ್ರಮಕ್ಕೆ ಸವಾಲಾಗಿ ಜನಿಸುವ ಭಿನ್ನ ಸಾಮಥ್ರ್ಯದ ಮಕ್ಕಳ ಪಾಲನೆ-ಪೋಷಣೆಯು ಬೆಲೆ ಕಟ್ಟಲಾಗದ ಮಾನವೀಯ ಸೇವೆಯಾಗಿದೆ. ನಿರ್ವಹಿಸಲು ಕಷ್ಟಸಾಧ್ಯವಾದ ಸಾಮಾಜಿಕ ಸೇವಾ ಕಾರ್ಯವನ್ನು ಕೈಗೆತ್ತಿಕೊಂಡಿರುವ ಹಿದಾಯ ಫೌಂಡೇಶನ್ ನಿರ್ಧಾರವು ನಿಶ್ಚಯವಾಗಿಯೂ ಪ್ರಶಂಸನೀಯವಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
2707pkt3
ಅವರು ಹಿದಾಯ ಫೌಂಡೇಶನ್ ಮಂಗಳೂರು ವತಿಯಿಂದ ಬಂಟ್ವಾಳ ತಾಲೂಕು ಕಾವಳಕಟ್ಟೆಯ ಹಿದಾಯ ಶೇರ್ ಆಂಡ್ ಕೇರ್ ಕಾಲೊನಿಯ ಕಮ್ಯುನಿಟಿ ಡೆವಲಪ್ ಸೆಂಟರ್ನಲ್ಲಿ ಆರಂಭವಾದ ಹಿದಾಯ ವಿಶೇಷ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ಶಾಸಕ ಬಿ.ಎ. ಮೊದಿನ್ ಬಾವಾ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಕಷ್ಟಸಾಧ್ಯವಾದ ಸೇವಾ ಕಾರ್ಯವನ್ನು ಸಮುದಾಯದಲ್ಲಿ ಪ್ರಥಮ ಬಾರಿಗೆ ಕೈಗೆತ್ತಿಕೊಂಡಿರುವ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಖುಷಿ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ಶೇಖ್ ಮುಹಮ್ಮದ್ ಶರೀಫ್ ಅವರು ಶಾಲೆ ಉದ್ಘಾಟಿಸಿದರು. ಹಿದಾಯ ಫೌಂಡೇಶನ್ ನೂತನ ಚೆಯರ್ಮೆನ್ ಝಕರಿಯಾ ಜೋಕಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಖತೀಬ್ ಮುಶ್ತಾಕ್ ಅಹ್ಮದ್ ರಝ್ವಿ ದುವಾ ನೆರವೇರಿಸಿದರು. ಅತಿಥಿಗಳಾಗಿ ಮುಮ್ತಾಝ್ ಅಲಿ ಕೃಷ್ಣಾಪುರ, ಅಮಾಕೋ ಕಂಪೆನಿಯ ಸಿಇಒ ಆಸಿಫ್, ಮನ್ಸೂರ್ ಅಝಾದ್, ಶಾಹುಲ್ ಹಮೀದ್ ದಮಾಮ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಸದಸ್ಯ ಬಿ.ಪದ್ಮಶೇಖರ್ ಜೈನ್, ಸ್ಥಳೀಯ ಮಸೀದಿ ಅಧ್ಯಕ್ಷ ಶೇಖ್ ರಹ್ಮತುಲ್ಲಾ ಶುಭ ಹಾರೈಸಿದರು.
ಇದೇ ವೇಳೆ ಸಾಮಾಜಿಕ ಸೇವೆ-ಬದ್ಧತೆಯ ಬಗ್ಗೆ ವಾರ್ತಾ ಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಿಶೇಷ ಉಪನ್ಯಾಸ ನೀಡಿದರು. ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಹಿದಾಯ ಕಾಲೊನಿಯ ವಿದ್ಯಾರ್ಥಿಗಳನ್ನು ಹಾಗೂ ಹಿದಾಯ ಮದ್ರಸದ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಹಿದಾಯ ಫೌಂಡೇಶನ್ ವಿವಿಧ ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.
ಟ್ರಸ್ಟ್ ಕಾರ್ಯದರ್ಶಿ  ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು ಅವರು ಸ್ವಾಗತಿಸಿದರು. ಸಂಸ್ಥೆಯ ಕೇಂದ್ರೀಯ ಘಟಕದ ಅಧ್ಯಕ್ಷ ಇಂತಿಯಾಝ್ ಜಿ.ಎ. ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವರದಿ ನೀಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಪ್ರಸ್ತಾವಿಸಿದರು. ಫೌಂಡೇಶನ್ನ ಆಡಳಿತಾಕಾರಿ ಆಬಿದ್ ಅಸ್ಗರ್ ವಂದಿಸಿದರು. ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *