ಬಂಟ್ವಾಳ : ಶಿಸ್ತು ಮತ್ತು ಸಮರ್ಪಣಾ ಮನೋಭಾವ ವಿದ್ಯಾರ್ಥಿಗಳಲ್ಲಿ ಅಗತ್ಯವಿದ್ದು ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಬೇಕು ಎಂದು ಬೆಳ್ತಂಗಡಿ ಗುರುದೇವ ಪ.ಪೂ ಕಾಲೇಜು ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ ಅವರು ಹೇಳಿದರು.

ಅವರು ಜು.25ರಂದು ಪುಂಜಾಲಕಟ್ಟೆ ಸ.ಪ.ಪೂ ಕಾಲೇಜಿನ ನೂತನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ರಾಷ್ಟ್ರನಾಯಕರ ಆದರ್ಶಗಳನ್ನು ಗೌರವಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.ಕಾಲೇಜು ಪ್ರಾಂಶುಪಾಲ ಸುಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಸಂಘದ ಪದಾಕಾರಿಗಳಿಗೆ ಪ್ರತಿಜ್ಞಾವಿ ಬೋಸಿದರು.ಉಪಪ್ರಾಂಶುಪಾಲೆ ಅರ್ಚನಾ,ನೂತನ ವಿದ್ಯಾರ್ಥಿ ಸಂಘದ ನಾಯಕರಾದ ಶರತ್ ಮತ್ತು ಇತರ ಪದಾಕಾರಿಗಳು ಹಾಗೂ ಉಪನ್ಯಾಸಕವೃಂದ,ಶಿಕ್ಷಕ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಷ್ಮಾ ಅವರು ಸ್ವಾಗತಿಸಿದರು.ಉಪನ್ಯಾಸಕ ಅಜಯ್ ಅವರು ಪ್ರಸ್ತಾವಿಸಿದರು.ವಿದ್ಯಾರ್ಥಿನಿಯರಾದ ಮಣಿಶ್ರೀ ವಂದಿಸಿದರು.ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.