ಬಜ್ಪೆ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಟೀಲು-ದೇವರಗುಡ್ಡೆ ಎಂಬಲ್ಲಿ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಎಸ್.ಐ. ರಮೇಶ್ ಹಾನಾಪುರ ನೇತೃತ್ವದ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕೆ ಹಾಜರುಪಡಿಸಿದೆ.

ಬಂಧಿತರನ್ನು ಉಮೇಶ್ ಕಿನ್ನಿಗೋಳಿ, ರೊನಾಲ್ಡ್ ಐಕಳ, ಪ್ರಸಾದ್ ಕಿನ್ನಿಗೋಳಿ, ಸುಂದರ ಕಿನ್ನಿಗೋಳಿ, ದಿವಾಣ ರೆಡ್ಡಿ ಕಿನ್ನಿಗೋಳಿ, ಮೋಹನ್ ನಾಕ್, ವಿಕ್ಟರ್ ಐಕಳ, ದಿನೇಶ್ ಐಕಳ ಎಂದು ಹೆಸರಿಸಲಾಗಿದೆ. ಇವರು ದೇವರಗುಡ್ಡೆಯಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.

ಬಂಧಿತರಿಂದ 3,800 ರೂ. ನಗದು, ಇಸ್ಪೀಟ್ ಎಲೆ ಮತ್ತಿತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ

By suddi9

Leave a Reply

Your email address will not be published. Required fields are marked *