ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಹೆಚ್ಚು ಬಳಸಲಾರಂಭಿಸಿರುವುದು ಮತ್ತು ತಂಬಾಕು ಸಂಬಂಧಿತ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ತಂಬಾಕು ಉತ್ಪನ್ನಗಳ ನಿಷೇಧ (ಕೋಟ್ಪಾ) ಕಾಯ್ದೆಯನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೊಳಿಸಬೇಕೆಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಮಾಹಿತಿ ಕಾರ್ಯಾಗಾರಕ್ಕೆ ಮುಂದಾಗಿದೆ.

ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.ದಕ್ಷಿಣ ಕನ್ನಡದಲ್ಲಿ ತಂಬಾಕು ಉತ್ಪನ್ನಗಳನ್ನು ವಿದ್ಯಾರ್ಥಿಗಳು ಹೆಚ್ಚು ಬಳಸುತ್ತಿರುವುದರಿಂದ ಮತ್ತು ತಂಬಾಕು ಸಂಬಂಧಿತ ಆರೋಗ್ಯ ಸಮಸ್ಯೆಗಳು ಅತೀ ಹೆಚ್ಚಿದ್ದು, ದಿನವೊಂದಕ್ಕೆ 20 ಮಂದಿ ಆರೋಗ್ಯ ಸಮಸ್ಯೆಯಿಂದ ಸಾಯುತ್ತಿದ್ದಾರೆನ್ನಲಾಗಿದೆ. ಇದನ್ನು ತಪ್ಪಿಸಲು ಇಲ್ಲಿ ಕಾಯ್ದೆಯನ್ನು ಹೆಚ್ಚು ಆದ್ಯತೆ ಮೇರೆಗೆ ಜಾರಿಗೊಳಿಸಲು ಅಧಿಕಾರಿಗಳು, ಸಾರ್ವಜನಿಕರು, ಖಾಸಗೀ ಸಂಸ್ಥೆಯವರು ಏನೇನು ಮಾಡಬೇಕು ಮತ್ತು ಹೇಗೆ ಕ್ರಮಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ಹಾಕಿಕೊಳ್ಳಲಾಗಿದೆ.

1 (1)

ತಂಬಾಕು ಸಂಬಂಧಿತ ಖಾಯಿಲೆಗಳಿಂದ ಬಳಲುವರಿಗಾಗಿ ರಾಜ್ಯದಲ್ಲಿ 800 ಕೋಟಿ ಹಾಗೂ ಕೇಂದ್ರ ಸರ್ಕಾರ 1ಲಕ್ಷ ಕೋಟಿ ವೆಚ್ಚವನ್ನು ಭರಿಸಲಾಗುತ್ತಿದೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಹಂತ ಹಂತವಾಗಿ ಅನುಷ್ಠಾನ ತರಲು ಮುಂದಾಗಿದೆ.ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ನೋಡಲ್ ಅಧಿಕಾರಿಯಾಗಿ ರಾಜ್ಯ ಗೃಹ ಇಲಾಖೆಯ ಅಧಿಕಾರಿ ಭಾಗವಹಿಸಲಿದ್ದಾರೆ.

ನಾಲ್ಕು ಸೆಕ್ಷನ್‍ಗಳ ಪ್ರಕಾರ ಕ್ರಮ:
ಕೋಟ್ಪಾ ಕಾಯ್ದೆಯಲ್ಲಿ ಸೆಕ್ಷನ್ 4 ಪ್ರಕಾರ ಸಾರ್ವಜನಿಕಸ್ಥಳದಲ್ಲಿ ಧೂಮಪಾನ ಮಾಡುವಂತಿಲ್ಲ, ಸೆಕ್ಷನ್ 5 ಪ್ರಕಾರ ತಂಬಾಕು ಉತ್ಪನ್ನಗಳಜಾಹಿರಾತನ್ನು ಹಾಕುವಂತಿಲ್ಲ, ಸೆಕ್ಷನ್ 6 ಪ್ರಕಾರ ಶಿಕ್ಷಣ ಸಂಸ್ಥೆಗಳ ಆಸುಪಾಸಿನಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ, ಸೆಕ್ಷನ್ 7 ಪ್ರಕಾರ ತಂಬಾಕು ಉತ್ಪನ್ನಗಳ ಮೇಲೆ ಶೇ.40 ಅಪಾಯದ ಎಚ್ಚರಿಕೆಯನ್ನು ಸೂಚನೆ ಹಾಕಬೇಕಾಗಿದೆ. ಇದನ್ನು ಉಲ್ಲಂಘಿಸುವವರ ಮೇಲೆ 200 ರೂ ವರೆಗೆ ದಂಡ ವಿಧಿಸಬಹುದಾಗಿದೆ.

ರಾಜ್ಯದಲ್ಲಿ 5ನೇ ಜಿಲ್ಲೆ ದ ಕ:
ಸರ್ವೋಚ್ಛನ್ಯಾಯಾಲಯದ ಆದೇಶದ ಮೇರೆಗೆ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಹೊರಟಿರುವ ಜಿಲ್ಲೆಗಳ ಸಾಲಿನಲ್ಲಿ ದಕ್ಷಿಣ ಕನ್ನಡ 5ನೇ ಸ್ಥಾನದಲ್ಲಿದೆ. ಮೊದಲನೆ ಜಿಲ್ಲೆಯಾಗಿ ಗದಗ, ಎರಡನೆಯದಾಗಿಕೊಲಾರ, ಮೂರನೆಯದಾಗಿಚಿಕ್ಕಮಂಗಳೂರು, ನಾಲ್ಕನೆಯದಾಗಿಉಡುಪಿ ಜಿಲ್ಲೆಯಲ್ಲಿ ಸಭೆಗಳನ್ನು ನಡೆಸಿ ಕಾಯ್ದೆ ಜಾರಿಗೆ ಮುಂದಾಗಲಾಗಿದೆ.
ಕಾಯ್ದೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯ ಎರಡು ಕಡೆಗಳಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ದ ಕ ಜಿಲ್ಲೆ ಬೀಡಿ ಉತ್ಪನ್ನದ ಕೇಂದ್ರವಾಗಿರುವುದರಿಂದ ಬೀಡಿ ಕಂಪನಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ಮತ್ತು ಉಲ್ಲಂಘಿಸಿದವರ ಮೇಲಿನ ಕಠಿಣ ಕ್ರಮದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ. ತಂಬಾಕು ಬೆಳೆಯುವವರಿಗೆ ಪರ್ಯಾಯ ಬೆಳಗಳನ್ನು ಬೆಳೆಸಲು ಬೇಕಾದ ರೀತಿಯಲ್ಲಿ ಸಂಶೋಧನೆನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *