ಬಂಟ್ವಾಳ: ಆನ್‍ಲೈನ್‍ನಲ್ಲಿ ಮೊಬೈಲ್ ಗೆದ್ದಿದ್ದೀರಿ, ಹಣ ಪಾವತಿಸಿ ಮೊಬೈಲ್ ಪಡೆದುಕೊಳ್ಳಿ ಎಂಬ ದೂರವಾಣಿ ಕರೆಯನ್ವಯ ಮೊಬೈಲ್ ಪಡೆಕೊಳ್ಳಲು ಹೋದ ವ್ಯಕ್ತಿಗೆ ಲಕ್ಷ್ಮೀ ಯಂತ್ರವನ್ನು ನೀಡಿ ಆನ್‍ಲೈನ್ ಸಂಸ್ಥೆ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಲೊರೆಟ್ಟೋ ನಿವಾಸಿ ಡೀಶನ್ ಡಿಮಿಲ್ಲೋ ಹಣ ಕಳೆದುಕೊಂಡು ಲಕ್ಷ್ಮೀ ಯಂತ್ರ ಪಡೆದುಕೊಂಡವರು.

DSC_9522

DSC_9524

DSC_9526ಕಳೆದ ಕೆಲ ದಿನಗಳ ಹಿಂದೆ ಸಂಸ್ಥೆಯೊಂದರಿಂದ ಕರೆ ಮಾಡಿ ಮೊಬೈಲ್ ಗೆದ್ದಿದ್ದೀರಿ 13 ಸಾವಿರದ ಮೊಬೈಲನ್ನು ಪೋಸ್ಟಲ್ ಚಾರ್ಜ್ 5ಸಾವಿರ ನೀಡಿ ಪಡೆದುಕೊಳ್ಳಿ ಎಂದು ತಿಳಿಸಿದ್ದರು. ಅದರಂತೆ ಡೀಶನ್ ಹಾಣ ಪಾವತಿ ಅಂಚೆ ಕಚೇರಿಯಿಂದ ಪಾರ್ಸೆಲ್ ಪಡೆದು ಬಿಚ್ಚಿ ನೋಡಿದಾಗ ಅದರೊಳಗೆ ಮೊಬೈಲ್ ಇರದೆ ಲಕ್ಷ್ಮೀ ಯಂತ್ರವನ್ನು ಮಾತ್ರ ಇಡಲಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

By suddi9

Leave a Reply

Your email address will not be published. Required fields are marked *