ಕಿನ್ನಿಗೋಳಿ: ಮುಲ್ಕಿ ಮೂಡಬಿದ್ರೆಯ ಒಟ್ಟು 30 ಗ್ರಾಮ ಪಂಚಾಯತ್ ನಲ್ಲಿ 21 ಪಂಚಾಯತ್ ಬಿಜೆಪಿ ಬಹುಮತ ಗಳಿಸಿದ್ದು ದಿನದಿಂದ ದಿನಕ್ಕೆ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ನಾಯಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಕೆಮ್ರಾಲ್ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್‍ಗೆ ಬಿಜೆಪಿ ಬೆಂಬಲಿತವಾಗಿ ಸ್ಪರ್ದಿಸಿದ ಸದಸ್ಯರ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ನಾಗೇಶ್ ಅಂಚನ್, ಸುಧಾಕರ ಶೆಟ್ಟಿ , ಸೇಸಪ್ಪ ಸಾಲ್ಯಾನ್, ಪ್ರಮೀಳಾ ಡಿ. ಶೆಟ್ಟಿ , ಮಮತಾ, ಲೋಹಿತ್ ಕುಮಾರ್, ಮಾಲತಿ ಆಚಾರ್ಯ, ತುಳಸಿ ಶೆಟ್ಟಿಗಾರ್, ಜಯಲಕ್ಷ್ಮಿ, ರಾಕೇಶ್ ಶೆಟ್ಟಿ ಪಂಜ, ಗುಲಾಬಿ, ಚಂದ್ರಹಾಸ, ಗೀತಾ, ಸ್ನೆಹಿತ ಪಿ ಶೆಟ್ಟಿಗಾರ್, ಹರಿಪ್ರಸಾದ್‍ರವರನ್ನು ಗೌರವಿಸಲಾಯಿತು. ಬಿಜೆಪಿ ನಾಯಕರಾದ ಡಿ. ಕೆ. ಶೆಟ್ಟಿ , ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್ , ಸಾವಿತ್ರಿ ಸುವರ್ಣ, ಜನಾರ್ಧನ ಕಿಲೆಂಜೂರು, ಜಯರಾಮ ಆಚಾರ್ಯ, ಸಚಿನ್ ಶೆಟ್ಟಿ ಮತ್ತಿತರರಿದ್ದರು. ರಾಮದಾಸ ಶೆಟ್ಟಿ ಸ್ವಾಗತಿಸಿದರು. ವಿನೋದ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.