ಮುಂಬಯಿ: ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ವನ್ನು ತೃತೀಯ ಬಾರಿ ಭಾರತ್
ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಪ್ರಾಪ್ತಿಸಿಕೊಂಡು ಸಹಕಾರಿ ರಂಗದ ಸರ್ವೋತ್ಕೃಷ್ಟ ಬ್ಯಾಂಕ್ ಪ್ರತಿಷ್ಠೆಗೆ ಪಾತ್ರವಾಯಿತು. ಇಂದಿಲ್ಲಿ ಬುಧವಾರ ಸಂಜೆ ದಾದರ್ ಪಶ್ಚಿಮದ ಪ್ರಭಾದೇವಿ ಅಲ್ಲಿನ ಹೊಟೇಲ್ ಕೊಹಿನೂರು ಸಭಾಗೃಹದಲ್ಲಿ ಸಹಕಾರಿ ಬ್ಯಾಂಕ್’ಸ್ ಅಸೋಸಿಯೇಶನ್ನ ವಾರ್ಷಿಕ ಮಹಾಸಭೆ ಹಾಗೂ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ದತ್ತರಾಮ ಚಾಳ್ಕೆ ಅಧ್ಯಕ್ಷತೆಯಲ್ಲಿ ನೇರವೇರಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳೊಂದಿಗೆ ದತ್ತರಾಮ ಚಾಳ್ಕೆ ಅವರು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರಿಗೆ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಫಲಕ ಪ್ರದಾನಿಸಿ ಭಾರತ್ ಬ್ಯಾಂಕ್ನ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ತುಳು-ಕನ್ನಡಿಗರ ಪ್ರತಿಷ್ಠಿತ ಆ ಕ ಸಂಸ್ಥೆಭಾರತ್ ಬ್ಯಾಂಕ್ನಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿಅವರು `ಪುರಸ್ಕಾರ’ ಸ್ವೀಕರಿಸಿ ಅವಿರತ ಶ್ರಮ ಹಾಗೂ ನಿಷ್ಕಲಂಕ ಸೇವೆಗೆ ಸಂದ ಗೌರವಎಂದು ಸಂತಸವನ್ನು ಹಂಚಿಕೊಂಡರು. 2013-2014ರ ಆರ್ಥಿಕ ಸಾಲಿನ ಒಂದು ಸಾವಿರದ ಐನೂರು ಕೋಟಿ ಮೊತ್ತಕ್ಕಿಂತ ಅಧಿಕ ಠೇವಣಿಯೊಂದಿಗೆ ಸಹಕಾರಿ ಸಂಸ್ಥೆಯಾಗಿ ಸೇವೆಗೈದು ಗ್ರಾಹಕರ ವಿಶ್ವಾಸಕ್ಕೆ ಭಾರತ್ ಬ್ಯಾಂಕ್ ಪಾತ್ರವೆಣಿಸಿದೆ. ಬ್ಯಾಂಕ್ನ ಗ್ರಾಹಕಮಿತ್ರತ್ವದಸೇವೆ, ಸಮಗ್ರ ಪ್ರಗತಿ ಮತ್ತು ಗತಸಾಲಿನ ವಾರ್ಷಿಕ ಹಣಕಾಸು ವರದಿ, ಬ್ಯಾಂಕ್ನ ಗುರುತರ ಸೇವೆ ಇತ್ಯಾದಿಗಳನ್ನು ಅಸೋಶಿಯೇಶನ್ ಪರಿಶೀಲಿಸಿದೆ. ಗುಣಮಟ್ಟದ ಸಹಕಾರಿ ಬ್ಯಾಂಕುಗಳಲ್ಲೇ ಭಾರತ್ ಬ್ಯಾಂಕ್ಗೆ ಪ್ರಪ್ರಥಮ ಸ್ಥಾನ ತನ್ನದಾಗಿಸುವಲ್ಲಿ ಯಶಕಂಡಿದೆ. ಆದುದರಿಂದಲೇ ಈ ಬಾರಿಯೂ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಗೌರವಕ್ಕೆ ಭಾರತ್ ಬ್ಯಾಂಕ್ ಪಾತ್ರವಾಗಿದೆ ಎಂದು ಅಸೋಸಿಯೇಶನ್ನ ಪದಾಧಿಕಾರಿಗಳು ಪ್ರಕಟಿಸಿದರು. ಸಮಾರಂಭದಲ್ಲಿ ಬ್ಯಾಂಕ್’ಸ್ ಅಸೋಸಿಯೇಶನ್ನ ದಿವಾಕರ ರಾವ್ ಸಂಢಗಳೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಬಿ.ಅಡ್ಸೂಲ್ ಮತ್ತಿತರಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ಯು.ಎಸ್.ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ಆರ್.ಡಿ.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅನ್ಬಲಗನ್ ಸಿ.ಹರಿಜನ ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶೋಭಾ ದಯಾನಂದ್, ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದು ಸೇವಾ ಸಫಲತೆಯ ಹರ್ಷ ವಿನಿಮಯ ಗೊಳಿಸಿಕೊಂಡರು.




