ಮಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೋಳಾರ ಮಂಗಳೂರು ದಕ್ಷಿಣ ವಲಯ ಮತ್ತು ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆ ಕುಲಶೇಖರ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ 2015-2016ನೇ ಸಾಲಿನ ಗುರುಪುರ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯು ಆ.13ರಂದು ಗುರುವಾರ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆ ಕುಲಶೇಖರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸಾಂತಾ ಕ್ರುಜ್ ಕಾನ್ವೆಂಟಿನ ಮುಖ್ಯಸ್ಥೆ ವಂದನೀಯ ಭಗಿನಿ ಅನ್ನಮರಿಯರವರು ಅಧ್ಯಕ್ಷರಾಗಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾಗಿರುವ ಶ್ರೀ ಲಕ್ಷ್ಮಿ ನಾರಾಯಣ ರಾವ್, ಪದವು ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ಜುಬೆದಾ, ದಕ್ಷಿಣ ವಲಯದ ಶಿಕ್ಷಣ ಸಂಯೋಜಕರು ಶ್ರೀಮತಿ ಹಿಲ್ಡಾ ಪಿಂಟೊ, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಸ್ಟ್ಯಾನಿ ತಾವ್ರೊ, ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ಸಿಸಿಲಿಯಾ ಮೆಂಡೋನ್ಸಾರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ತಮ್ಮಲಿರುವ ಸುಪ್ತ ಪ್ರತಿಭೆಗಳನ್ನು ಪ್ರರ್ದಶಿಸಲು ಅವಕಾಶ ದೊರೆತಾಗ ಅದನ್ನು ಯಾವ ರೀತಿ ಬಳಸಬೇಕು ಹಾಗೂ ಕೇವಲ ಗೆಲುವನ್ನೇ ನಿರೀಕ್ಷಿಸದೆ ಸೋಲು ದೊರೆತಾಗಲೂ ಅದನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದುವರೆಯಬೇಕೆಂದು ಸಂದೇಶವಿತ್ತರು. ನೆರೆದ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಒಟ್ಟು 31 ಸ್ಪರ್ಧೆಗಳು ನಡೆದವು. ವಿವಿಧ ಶಾಲೆಗಳ ಶಿಕ್ಷಕರು ಹಾಗೂ ತೀರ್ಪುದಾರರು ಆಗಮಿಸಿದ್ದರು. ಸುಮಾರು 891 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಂ|ಭ| ಸಿಸಿಲಿಯಾ ಮೆಂಡೋನ್ಸಾರವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪ್ರಿಯಾ ಡಿ’ಕುನ್ಹಾ ಕಾರ್ಯಕ್ರಮವನ್ನು ನಿರೂಪಿಸಿದರು.









Congratulations for successfully conducting Prathibha Karanji. Indeed it was a great occasion for thousands of students to exhibit their talents and win prizes. Congratulations to the organizers. May God enthuse your passion for art and culture