ಬಂಟ್ವಾಳ : ದೇಶದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ತಜ್ಞ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸುಗಳು ಅವರ ದೇಹದೊಂದಿಗೆ ಮಣ್ಣಾಗದೆ ಅದನ್ನು ನನಸಾಗಿಸಲು ನಾವೆಲ್ಲರೂ ಪಣತೊಟ್ಟು ಒಟ್ಟಾಗಿ ಕೆಲಸ ಮಾಡಿದಾಗ ಅವರ ಕನಸಿನ ಭಾರತ ಸಾಕಾರಗೊಳ್ಳುವುದರ ಜೊತೆಗೆ ದೇಶದ ಅಭಿವೃದ್ದಿ ಸಾಧ್ಯ. ದೇಶ ಅಭಿವೃದ್ದಿ ಪಥದಲ್ಲಿ ಮುನ್ನಡೆದಾಗ ಸ್ವಾತಂತ್ರ್ಯೋತ್ಸವಕ್ಕೂ ವಿಶೇಷ ಅರ್ಥ ಬರುತ್ತದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ ಹೇಳಿದರು.

ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ದೇಶದ 69ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು ವಿದ್ಯಾರ್ಥಿ ಸಮುದಾಯ ಈ ದೇಶದ ಭವಿಷ್ಯದ ಕಣ್ಣುಗಳು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶಕ್ಕಾಗಿ ಏನಾದರೂ ಅತ್ಯಮೂಲ್ಯ ಕೊಡುಗೆಯನ್ನು ನೀಡಬೇಕು. ಇದಕ್ಕಾಗಿ ಡಾ ಕಲಾಂ ಅವರನ್ನೇ ಮಾದರಿ ವ್ಯಕ್ತಿತ್ವವನ್ನಾಗಿ ಸ್ವೀಕರಿಸಿ ಎಂದು ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಗದೀಶ್ ಕುಂದರ್, ಸತೀಶ್ ಕುಲಾಲ್, ಮಹಮ್ಮದ್ ಟಿ, ಲತೀಫ್ ಖಾನ್, ರಮೇಶ್ ಪೂಜಾರಿ, ಸುಧಾಕರ ಮಡಿವಾಳ, ವೆಂಕಟೇಶ್ ನಾಯಕ್, ಪಿ.ಎಂ ಅಶ್ರಫ್ ಪಾಣೆಮಂಗಳೂರು, ಶ್ರೀಮತಿ ಇಂದಿರಾ ಚಂದಪ್ಪ, ಉಮೇಶ್ ಬೋಳಂತೂರು, ಕಾಲೇಜು ಪ್ರಾಂಶುಪಾಲೆ ಸರಸ್ವತಿ ಬಿ., ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ಯೂಸುಫ್, ದಾಮೋದರ, ಯಶೋಧ ಕೆ. ಹಾಗೂ ಸ್ಥಳೀಯರು ಹಾಜರಿದ್ದರು.
ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಕೌಶಲ್ಯ ತರಬೇತಿ ನೀಡಿದ ಚಂದ್ರಶೇಖರ ರಾವ್ ಅವರನ್ನು ಅಭಿನಂದಿಸಲಾಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಸರಸ್ವತಿ, ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯರಾದ ಜಗದೀಶ್ ಕುಂದರ್,
