ಬಂಟ್ವಾಳ:   ದ ಕ ಜಿ ಪಂ ಹಿ ಪ್ರಾ ಶಾಲೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ಧ್ವಜಾರೋಹಣ ಮಾಡಿದರು. ನಂತರ ನಡೆದ ಮೆರವಣಿಗೆಗೆ ಕಲಾವಿದ ಪಿ ಕೆ ದಾಮೋಧರ ಚಾಲನೆ ನೀಡಿದರು.

1 (1)

1 (3)

1 (2)

ಈ ಸಂದರ್ಭದಲ್ಲಿ ಬಾಲಕೃಷ್ಣ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಆಳ್ವ, ಕಾರ್ಗಿಲ್ ಯೋಧ ಹರೀಶ್ ಶೆಟ್ಟಿ ಪಡಿಬಾಗಿಲು, ಎಸ್ ಡಿ ಎಂ ಸಿ ಸದಸ್ಯ ಪ್ರಭಾಕರ ಶೆಟ್ಟಿ ದಂಬೆಕಾನ ಇವರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಲಲಿತಾ ಕೆ ವಂದಿಸಿದರು. ಪುಷ್ಪಾವತಿ ನಿರೂಪಿಸಿದರು . ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *