ಬಂಟ್ವಾಳ: ಬೋಳಂತೂರು ಹಾಲು ಉತ್ಪಾದಕರ ಸಹಕಾರಿ ಸಂಘದ 9ನೇ ವಾರ್ಷಿಕ ಮಹಾಸಭೆಯೂ ಸಂಘದ ಅಧ್ಯಕ್ಷರಾದ ಬಿ. ಸುಧಾಕರ ರೈ ಅವರ ಅಧ್ಯಕ್ಷತೆಯಲ್ಲಿ ಆ.18ರಂದು ಮಂಗಳವಾರ ಸಂಘದ ಕಛೇರಿಯಲ್ಲಿ ಜರುಗಿತು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹದಾಯಕವಾಗಿ ಉಡುಗೊರೆಯನ್ನು ನೀಡಲಾಯಿತು. ಸಂಘದ ವಾರ್ಷಿಕ ಲಾಭದಲ್ಲಿ ಶೇ.10% ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು. ಸಭೆಯಲ್ಲಿ ಒಕ್ಕೂಟದ ಬಂಟ್ವಾಳ ತಾಲೂಕಿನ ವೈದ್ಯಾಧಿಕಾರಿ ಕುಮಾರಿ ಹರ್ಷಿತಾ ಅವರು ಹೈನುಗಾರಿಕೆಯ ಮಾಹಿತಿಗಳನ್ನು ನೀಡುತ್ತಾ ಜಾನುವಾರುಗಳ ಆರೈಕೆಯ ಬಗ್ಗೆ ತಿಳಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀಮತಿ ಜಾನೆಟ್ ರೊಸಾರಿಯಾ ಅವರು ಹಾಲಿನ ಗುಣಮಟ್ಟದ ಬಗ್ಗೆ ಮತ್ತು ಒಕ್ಕೂಟದ ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷರಾದ ಬಿ. ಸುಧಾಕರ ರೈಯವರು ಹಾಲು ಉತ್ಪಾದನೆ ಹೆಚ್ಚಿಸುವ ಬಗ್ಗೆ ಮತ್ತು ಸಂಘದ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ವಿಶ್ವನಾಥ ರೈ ಸ್ವಾಗತಿಸಿ, ನಿರ್ದೇಶಕರಾದ ತಾರಾನಾಥ ವಂದನಾರ್ಪಣೆ ಮಾಡಿದರು.