ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ.
ಪುರಸಭಾ ವ್ಯಾಪ್ತಿಯ ಲಾಡಿ ನಿವಾಸಿ ಪಾಶ್ರ್ವನಾಥ ಬಲ್ಲಾಳ್ ಪ್ರಾಂತ್ಯ ಗ್ರಾಮದ ಹಳೆಯ ನ್ಯಾಯಾಲಯದ ಕಟ್ಟಡ ಸಮೀಪ ಕ್ಯಾಂಟೀನ್ ನಡೆಸುತ್ತಿದ್ದು, ಶನಿವಾರ ಬೆಳಿಗ್ಗೆ 5.30ರ ಸುಮಾರಿಗೆ ಎಂದಿನಂತೆ ಕ್ಯಾಂಟೀನ್ಗೆ ಬಂದಿದ್ದರು. ಬಾಗಿಲು ತೆರೆಯಲು ಕಾರಿನಲ್ಲಿ ಬಂದಿದ್ದು ಹೊಟೇಲ್ ಬಳಿ ಕಾರು ನಿಲ್ಲಿಸಿ ಕಾರಿನಿಂದ ಇಳಿಯುತ್ತಿದ್ದಂತೆ ಪಕ್ಕದಲ್ಲೇ ನಿಂತಿದ್ದ ನಂಬ್ರ ಕೆಎ 19ಎನ್ 1973 ಕಾರಿನಿಂದ ಇಳಿದ ಇಬ್ಬರು ಅಪರಿಚಿತರ ಪೈಕಿ ಒಬ್ಬ ಚೂರಿ ತೋರಿಸಿ ಬಾಯಿಗೆ ಕೈಯನ್ನು ಒತ್ತಿಹಿಡಿದರೆ ಮತ್ತೊಬ್ಬ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಚೈನು, 8500ನಗದು, ಮೊಬೈಲ್ ಕಾರು ಹಾಗೂ ಹೊಟೇಲಿನ ಕೀಯನ್ನು ಕಸಿದು ಅದೇ ಕಾರಿನಲ್ಲಿ ಮೂಡುಬಿದರೆಗೆ ಕಡೆಗೆ ಪರಾರಿಯಾದರೆನ್ನಲಾಗಿದೆ.

ಈ ಕುರಿತು ಪಾಶ್ರ್ವನಾಥ್ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ತಂಡವು ಸುಲಿಗೆ ಸಂದರ್ಭ ಬಳಸಿದ ಕಾರು ಶುಕ್ರವಾರ ರಾತ್ರಿ ತೊಕ್ಕೊಟ್ಟುವಿನಲ್ಲಿ ಕಳವು ಗೈದಿರುವ ಕಾರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಮೂಡುಬಿದಿರೆ ವೃತ್ತನಿರೀಕ್ಷಕ ಅನಂತಪದ್ಮನಾಭ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *