ಬಂಟ್ವಾಳ: ನಿವೃತ್ತ ಆದಾಯ ತೆರಿಗೆ ಅಧಿಕಾರಿ ರಾಮಚಂದ್ರ ಪೇರ್ಡೆ (63) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೆ.1ರಂದು ನಿಧನ ಹೊಂದಿದರು.

0109pktG1(Ramachandra)
ಮೃತರು ಆದಾಯ ತೆರಿಗೆ ಅಧಿಕಾರಿ ಪತ್ನಿ ಸವಿತಾ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಪೇರ್ಡೆ ನಿವಾಸಿಯಾಗಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿಯ ಅಕಾರಿಯಾಗಿ ಮಂಗಳೂರು, ಗೋವಾ, ಹಾಸನ, ಶಿವಮೊಗ್ಗ , ಬೆಂಗಳೂರು ಮೊದಲಾದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉತ್ತಮ ಕ್ರೀಡಾ ಪಟುವಾಗಿದ್ದ ಅವರು ಬ್ಯಾಡ್ಮಿಂಟನ್ನಲ್ಲಿ ಇಲಾಖೆಯನ್ನು ಅಂತರ್ ರಾಜ್ಯಮಟ್ಟದಲ್ಲಿ ಪ್ರತಿನಿಸಿದ್ದರು. ಅವರು ಆದಾಯ ತೆರಿಗೆ ಅಧಿಕಾರಿಗಳ ಅಸೋಸಿಯೇಶನ್ ಮತ್ತು ಹೌಸಿಂಗ್ ಸೊಸೈಟಿಯ ಅಧ್ಯಕ್ಷರಾಗಿದ್ದರು.
ನಿವೃತ್ತಿಯ ಬಳಿಕ ಹುಟ್ಟೂರಾದ ಪೇರ್ಡೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಇಲ್ಲಿಗೆ ಸಮೀಪದ ಪುರಿಯ ಶ್ರೀ ದೇವಿ ಭಜನ ಮಂದಿರದ ರಂಗಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಮೃತರ ಅಂತಿಮ ಸಂಸ್ಕಾರ ಪೇರ್ಡೆಯಲ್ಲಿ ಸೆ.3ರಂದು ಗುರುವಾರ ನಡೆಯಲಿದೆ.

By suddi9

Leave a Reply

Your email address will not be published. Required fields are marked *