ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಕಂಬಳದಡ್ಡ ಗದ್ದೆಯಲ್ಲಿ ಭಾನುವಾರ ಸಂಜೆ ನಡೆದ ಮೊಸರು ಕುಡಿಕೆ ಮತ್ತು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕ, ಶತಾಯುಷಿ ತಮ್ಮಯ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಪ್ರಮುಖರಾದ ಎಂ.ದುರ್ಗಾದಾಸ್ ಶೆಟ್ಟಿ, ಸಂತೋಷ್ ಕುಮಾರ್ ಬೆಟ್ಟು, ಶರತ್ ಕೊಯಿಲ, ಸಂತೋಷ್ ಕುಮಾರ್ ಚೌಟ, ಪಿ.ರಾಜೇಶ್ ಜೈನ್, ಹರೀಶ ಶೆಟ್ಟಿ ಕೈತ್ರೋಡಿ, ಶೇಖರ ಅಂಚನ್, ಬಸವರಾಜ್, ಕೆ.ರವೀಂದ್ರ ಪೂಜಾರಿ, ದಿನೇಶ ಕುದ್ಕೋಳಿ ಮತ್ತಿತರರು ಉಪಸ್ಥಿತರಿದ್ದರು.
