ಬಂಟ್ವಾಳ :ಮಂಗಳೂರು ವಿದ್ಯುಚ್ಚಕ್ತಿ ಕಂಪೆನಿಯಿಂದ ಅನುಮತಿ ಪಡೆದ 8 ಕಿ. ವ್ಯಾ ಸೋಲಾರ್ ರೂಫ್ ಟಾಪ್‍ನ್ನು ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನಲ್ಲಿ ಆಡಳಿತ ಮಡಳಿಯು ಅಳವಡಿಸಿರುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಇದೇ ಪ್ರಥಮವಾಗಿ ಸಿದ್ಧಗೊಂಡಿರುವ ಈ ಸೌರ ವಿದ್ಯ್ಯುತ್ ಜಾಲ ನಿವ್ವಳ ಮಾಪನ ವ್ಯವಸ್ಥೆಯ ಉದ್ಧಾಟನೆಯು ಸೆ. 21, 2015ರಂದು ಕಾಲೇಜಿನಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರಿ. ಬಿ. ರಮಾನಾಥ ರೈಯವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೆಸ್ಕಾಂನ ಆಡಳಿತ ನಿದೇಶಕರಾದ ಶ್ರೀ ಚಿಕ್ಕನಂಜಪ್ಪ ಮತ್ತು ಔಡಿb ಇಟಿeಡಿgಥಿ ಪ್ರೈ. ಲಿಮಿಟೆಡ್‍ನ ಜನರಲ್ ಮ್ಯಾನೇಜರ್ ಶ್ರೀ ಸುಧೀಂದ್ರ. ಟಿ. ಇವರುಗಳು ಭಾಗವಹಿಸಲಿದ್ದಾರೆ. ಕಾಲೇಜಿನ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *