ಬಂಟ್ವಾಳ:ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ವಿರುದ್ಧ ಮಾನಹಾನಿಕಾರಕ ವರದಿ ಪ್ರಕಟಿಸಿದ ವಂಶ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕ,ಪ್ರಕಾಶಕ,ಮಾಲಕ ವಿಶ್ವನಾಥ್ ಬಂಟ್ವಾಳ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
2014ರ ಆಗಸ್ಟ್ ತಿಂಗಳ 11 ರಿಂದ 25 ರ ತನಕದ ಅವಧಿಯ ಪತ್ರಿಕೆಯಲ್ಲಿ ಪುರಸಭೆ ಗೋಲ್ಮಾಲ್ ಬಯಲು! ಮಾಜಿ ಅಧ್ಯಕ್ಷರ ಮೇಲೆ ಅವ್ಯವಹಾರ ಆರೋಪ ಎಂಬ ತಲೆಬರಹದಡಿ ಸುದ್ದಿಯನ್ನು ಪ್ರಕಟಿಸಲಾಗಿತ್ತು.ಈ ಬಗ್ಗೆ ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಅವರು ವಂಶ ಪತ್ರಿಕೆ ಸಂಪಾದಕ,ಮಾಲಕ,ಪ್ರಕಾಶಕ ವಿಶ್ವನಾಥ್ ವಿರುದ್ಧ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾಧಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಅಕ್ಟೋಬರ್ 17ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.ಫಿರ್ಯಾದಿ ದಿನೇಶ್ ಭಂಡಾರಿಯ ಪರವಾಗಿ ಬಿ.ಸಿ.ರೋಡ್ ನ್ಯಾಯವಾದಿ ಜಯರಾಮ್ ರೈ ವಾದಿಸಿದ್ದರು