ಕಿನ್ನಿಗೋಳಿ: ಕ್ರೀಡೆಗೆ ಪ್ರೋತ್ಸಾಹ ನೀಡ ಬೇಕಾದ ಕ್ರೀಡಾ ಸಚಿವರೇ ಕ್ರೀಡೆಗೆ ಅಡ್ಡಿ ಪಡಿಸುತ್ತಾರೆ ಎಂದರೆ ಅದು ನಮ್ಮ ದುರಾದ್ರಷ್ಟ, ತಮ್ಮ ಕೈಯಲ್ಲಿ ಆಡಳಿತ ಇದೆ ಎಂದು ಸಚಿವರಾದ ಅಭಯಚಂದ್ರ ಜೈನ್ ತಮ್ಗೆ ಬೇಕದಂತೆ ನಡೆದುಕೊಳ್ಳುತ್ತಾರೆ, ಸರಕಾರಿ ಅಧಿಕಾರಿಗಳನ್ನು ತಮಗೆ ಒತ್ತಡದ ಮೂಲಕ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ ಎಂದು ಎಂದು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ಹರಿಪಾದೆ ಸ್ಪೋಟ್ರ್ಸ್ ಕ್ಲಬ್‍ನ ಯುವಕರು ಕಬಡ್ಡಿ ಪಂದ್ಯಾಟಕ್ಕಾಗಿ ಸರ್ಕಾರಿ ಜಮೀನನ್ನು ಬಳಸಿಕೊಂಡಾಗ ಆ ಕ್ರೀಡಾ ಕೂಟಕ್ಕೆ ಕಂದಾಯ ಇಲಾಖೆಯ ಮೂಲಕ ತಡೆ ಒಡ್ಡಿದ್ದನ್ನು ವಿರೋಧಿಸಿ ಪಂಜದ ಹರಿಪಾದ ಜಾರಂದಾಯ ಯುವಕ ಮಂಡಲದ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಹಿಂದೂ ಸಂಘ ಪರಿವಾರದ ಸತ್ಯಜಿತ್ ಸುರತ್ಕಲ್ ಮಾತನಾಡಿ ಸಚಿವ ಜೈನ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಸರಕಾರಿ ಜಾಗದಲ್ಲಿ ಎಷ್ಟೊ ಆಕ್ರಮ ಕಟ್ಟಡಗಳು ತಲೆ ಎತ್ತಿ ನಿಂತಿದೆ, ಅದರ ಬಗ್ಗೆ ಮಾತನಾಡದ ಸಚಿವರು, ಇದರ ಬಗ್ಗೆ ಹೀಗೆ ಕ್ರಮ ಕೈಗೊಳ್ಳುವಂತೆ ಮಾಡುತ್ತಾರೆ ಎಂದರು, ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್ ಮಾತನಾಡಿ ಕ್ರೀಡ ಸಚಿವರಾಗಿ ಈ ರೀತಿಯ ನಡೆ ತಪ್ಪು, ಈ ಬಗ್ಗೆ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ಸಿದ್ದರಿದ್ದೇವೆ ಎಂದರು ಈ ಸಂದರ್ಭ ಬಿಜೆಪಿಯ ಕೆ.ಭುವನಾಭಿರಾಮ ಉಡುಪ, ಸತೀಶ್ ಭಟ್, ಈಶ್ವರ ಕಟೀಲು, ಸನತ್‍ಕುಮಾರ್ ಹಳೆಯಂಗಡಿ, ವಿನೋದ್ ಕುಮಾರ್, ಕಸ್ತೂರಿ ಪಂಜ, ಸುನಿಲ್ ಆಳ್ವಾ ಮೂಲ್ಕಿ, ವಿನೋದ್‍ಸಾಲ್ಯಾನ್ ಬೆಳ್ಳಾಯರು, ದಿನೇಶ್ ಹರಿಪಾದೆ ಇನ್ನಿತರರು ಹಾಜರಿದ್ದರು.




