ವೀರಕಂಭ: ದ,ಕ,ಜಿ,ಪಂ.ಹಿಪ್ರಾಶಾಲೆ ಮಜಿ ವೀರಕಂಭ ಇಲ್ಲಿ ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸ್ವಚ್ಛತಾ ಅಭಿಯಾನ ಹಾಗೂ ಸಾವಯವ ಗೊಬ್ಬರ ಘಟಕವನ್ನು ಅ.2ರಂದು ಶುಕ್ರವಾರ ಗ್ರಾಮ ಪಂಚಾಯತ್ ವೀರಕಂಭ ಇದರ ಸಹಭಾಗಿತ್ವದಲ್ಲಿ ನೆರವೇರಿಸಲಾಯಿತು.

ಗಾಂಧೀಜಿ ಹಾಗೂ ಶಾಸ್ತ್ರಿಯವರ ಜೀವನದ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿ ಕೊಳ್ಳಬೇಕು, ಸ್ವಚ್ಛತೆಯು ಜೀವನದ ಅಂಗವಾಗಿದ್ದಾಗ ಮಾತ್ರ ಶಿಕ್ಷಕರಾದ ಶ್ರೀ ನಾರಾಯಣ ಪೂಜಾರಿಯವರು ತಿಳಿಸಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಶಾಲಾ ಆವರಣದ ಸ್ವಚ್ಛತೆಯನ್ನು ನಡೆಸಿದರು. ತದನಂತರದಲ್ಲಿ ವೀರಕಂಭ ಗ್ರಾಮ ಪಂಚಾಯತ್ನ ಸಹಭಾಗಿತ್ವದಲ್ಲಿ ಸಾವಯವ ಗೊಬ್ಬರದ ಘಟಕವನ್ನು ಉದ್ಘಾಟಿಸಲಾಯಿತು. ನಿತ್ಯ ಜೀವನದಲ್ಲಿ ಬಳಕೆಯ ನಂತರದಲ್ಲಿ ಉಳಿದ ಕಸವಂಬುದಾಗಿ ವಿಂಗಡಿಸಿಕೊಂಡು ಸುಲಭ ವಿಧಾನದಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಪಂಚಾಯತ್ ವತಿಯಿಂದ ನಿರ್ಮಿಸಲಾದ ಸಾವಯವ ಗೊಬ್ಬರದ ಘಟಕವನ್ನು ಉದ್ಘಾಟಿಸಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ನಿಶಾಂತ್ ರೈ ಯವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾರವರು ವಹಿಸಿದ್ದರು. ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀಯುತ ರಾಮಚಂದ್ರ ಪ್ರಭು, ಅಬ್ಬಾಸ್ ಕೆಲಿಂಜ, ಜನಾರ್ಧನ ನಾರುಕೋಡಿ, ಇವರು ಭಾಗವಹಿಸಿದ್ದರು.
ಶಿಕ್ಷಕಿ ಶಕುಂತಳಾ ಎಂ.ಬಿ. ಸ್ವಾಗತಿಸಿ, ಸಿಸಿಲಿಯಾ ವಂದಿಸಿದರು. ಸಂಗೀತ ಶರ್ಮರವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಯುತ ಚಿನ್ನಾ ಮೈರ, ಶ್ರೀಮತಿ ಗೀತಾಹಾಗೂ ಕುಮಾರಿ ಜ್ಯೋತಿ ಸಹಕರಿಸಿದರು.