ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ಭಾರತೀಯ ಜೀವಾ ವಿಮಾ ನಿಗಮ ಮತ್ತು ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಆಶ್ರಯದಲ್ಲಿ ಹೋಟೇಲ್ ರಂಗೋಲಿಯಲ್ಲಿ ಜರಗಿದ ಉಚಿತ ವೈದ್ಯಕೀಯ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಕನ್ನಡಕ ನೀಡುವ ಮೂಲಕ ಚಾಲನೆ ನೀಡಿದರು.
ಸಹಾಯಕ ಶಿಕ್ಷಣಾಧಿಕಾರಿ ಸುಜಾತ , ಭಾರತೀಯ ಜೀವ ವಿಮಾ ನಿಗಮದ ಉಪಶಾಖಾಧಿಕಾರಿ ಮಧುಸೂದನ್, ಅಭಿವೃದ್ಧಿ ಅಧಿಕಾರಿ ಹರೀಶ್ ಪೈ , ಸದಾನಂದ ಶೆಟ್ಟಿ ರಂಗೋಲಿ , ಸೇವಾಂಜಲಿ ಟ್ರಸ್ಟಿ ಕೆ.ಕೆ.ಪೂಂಜ , ಎಂ.ಕೆ.ಖಾದರ್ , ಪ್ರಶಾಂತ್ , ಉಮಾಚಂದ್ರಶೇಖರ್ ,ಕೆ.ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.