ಬಂಟ್ವಾಳ : ಕೇಂದ್ರ ಸರಕಾರದ ಇಂದ್ರಧನುಷ್ ಅಭಿಯಾನದಡಿ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಕಡ್ಡಾಯವಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಆಶ್ರಯದಲ್ಲಿ ವಿಟ್ಲ ಸಮೀಪದ ನೆಲ್ಲಿಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಆರಂಭಿಸಲಾಯಿತು.
ತಾ.ಪಂ.ಸದಸ್ಯೆಜೂಲಿಯಾನ ಮೇರಿ ಲೋಬೋ ಚಾಲನೆ ನೀಡಿದರು. ವಿಟ್ಲ ಸಮುದಾಯ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಪ್ರಶಾಂತ್, ಆರೋಗ್ಯ ಸಹಾಯಕಿ ವಸಂತಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.