ಬಂಟ್ವಾಳ : ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ನಿವಾಸಿ ಶ್ರೀ ಉಮೇಶ್ ನಾಯಕ್ ಎಂಬವರು ಮರದಿಂದ ಬಿದ್ದು ಸೊಂಟ ಮುರಿತಕ್ಕೊಳಗಾಗಿ ಕಳೆದ ನಾಲ್ಕು ತಿಂಗಳಿಂದ ನಡೆಯಲಾಗದ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿದ್ದಾರೆ.
ಇದರ ಚಿಕಿತ್ಸೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕ್ರತಿಕ ಸಂಘ ನೇರಳಕಟ್ಟೆ ಇದರ ವತಿಯಿಂದ ರೂ.5000.00 ಮೊತ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬೋಜನಾರಾಯಣ ಹಾಗೂ ವಿಠಲ ನಾಯಕ್ , ಬೇಬಿ ನಾಯಕ್, ರಾಮಚಂದ್ರ, ಕುಶಲ ಎಂ. ಪೆರಾಜೆ, ಪುಷ್ಪರಾಜ್ ಉಪಸ್ಥಿತರಿದ್ದರು.