ಮೂಡುಬಿದರೆ:ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯ ನೈಜ ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಆಗ್ರಹಿಸಿದರು.
mbd_oct13_1
ಮೃತ ಪ್ರಶಾಂತ್ ಪೂಜಾರಿಯ ಬಿರಾವುನಲ್ಲಿರುವ ನಿವಾಸಕ್ಕೆ ಅವರು ಮಂಗಳವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಕೊಲೆ ಮಾಡುವಂತ ದೊಡ್ಡ ತಪ್ಪನ್ನು ಪ್ರಶಾಂತ್ ಮಾಡಿಲ್ಲ. ಆತನ ಬದುಕಿನಲ್ಲಿ ಆಗಬಾರದು ಆಗಿ ಹೋಯಿತು. ಶಾಂತಿಗೆ ಹೆಸರಾದ ಜೈನಕಾಶಿ ಮೂಡುಬಿದರೆಯಲ್ಲಿ ನೆತ್ತರು ಹರಿದಿರುವುದು ದುರದೃಷ್ಟಕರ. ಪ್ರಶಾಂತ್ನ ಕೊಲೆ ಪ್ರಕರಣದಲ್ಲಿ ಪೊಲೀಸರು ಯಾರನ್ನೊ ಫಿಕ್ಸ್ ಮಾಡಿ ಕೈತೊಳೆದುಕೊಳ್ಳಬಾರದು. ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಪೊಲೀಸರು ನಿಸ್ಪಕ್ಷಪಾತವಾಗಿ ಹಾಗೂ ಕ್ಷಿಪ್ರಗತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿ ಪ್ರಶಾಂತ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಈ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು. ನಿಮ್ಮ ಮಗ ಹಿಂದೂ ಧರ್ಮಕ್ಕಾಗಿ ಪ್ರಾಣಕಳಕೊಂಡಿದ್ದಾನೆ. ನಿಮ್ಮ ಜತೆ ನಾವಿದ್ದೇವೆ ಎಂದು ಸ್ವಾಮೀಜಿ ಪ್ರಶಾಂತ್ರ ತಂದೆ ಆನಂದ ಪೂಜಾರಿಗೆ ದೈರ್ಯ ತುಂಬಿದರು.

By suddi9

Leave a Reply

Your email address will not be published. Required fields are marked *