ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ : ಪೊಲೀಸ್ ಇಲಾಖೆ ವೈಫಲ್ಯ
ಆರೋಪಿಗಳನ್ನು ಬಂಧಿಸದಿದ್ದರೆ ಅ.20ರಿಂದ ಸತ್ಯಾಗ್ರಹ : ಯಡ್ಡಿಯೂರಪ್ಪ ಖಡಕ್ ಎಚ್ಚರಿಕೆ
ಮೂಡುಬಿದಿರೆ : ಸಮಾಜ ಸೇವಕ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಅವರನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಹತ್ಯೆಯ ನಂತರ ನಡೆದ ಗಲಭೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊನೆಯುಸಿರೆಳೆಯುವ ಮುನ್ನ ಪ್ರಶಾಂತ್ ಹೇಳಿಕೆ ನೀಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ವ್ಯವಸ್ಥೆ ವೈಫಲ್ಯ ಕಂಡಿದೆ. ಪ್ರಕರಣದ ನೈಜ್ಯ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಅಕ್ಟೋಬರ್ 20ರಂದು ಮಂಗಳೂರಿನಲ್ಲಿ ಸತ್ಯಾಗ್ರಹ ಮಾಡಲಿದ್ದೇವೆ. ನಾನು ಸೇರಿದಂತೆ ಪಕ್ಷದ ಪ್ರಮುಖರು ಸೇರಿ ಸತ್ಯಾಗ್ರಹ ನಡೆಸುತ್ತೇವೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

mbd_oct14_4 (1) mbd_oct14_4 (3)
ಅವರು ಶುಕ್ರವಾರ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವಾನ ಹೇಳಿ ರೂ 50,000 ಆರ್ಥಿಕ ನೆರವು ನೀಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
‘ದುಷ್ಕರ್ಮಿಗಳಿಂದ ಕೊಲೆಯಾದ ಪ್ರಶಾಂತ್ ಅಕ್ರಮ ಗೋಸಾಗಾಟಗಳನ್ನು ತಡೆಯುವಂತಹ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದವರು. ಆದರೆ ಈ ‘ಘಟನೆ ನಡೆದು ಇದುವರೆಗೂ ಪ್ರಶಾಂತ್ ಮನೆಗೆ ಪೊಲೀಸರು ಬಂದು ಮಾಹಿತಿ ಪಡೆದಿಲ್ಲ. ಸಚಿವರು ಕೂಡಾ ಮೃತನ ಮನೆಗೆ ಆಗಮಿಸಿ ಸಾಂತ್ವಾನ ಹೇಳಿಲ್ಲ. ಇದರಿಂದ ಪ್ರಕರಣವನ್ನು ಹಳ್ಳಹಿಡಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಮಂಗಳೂರಿನ ಪ್ರೊಪೆಸರ್ ಸೋಮಯಾಜಿ ಮೂಡುಬಿದಿರೆಗೆ ಬಂದು ಯಾವ ಸ್ಥಳದಲ್ಲಿ ಚಾಲೆಂಜ್ ಮಾಡಿದ್ದರೋ ಅದೇ ಸ್ಥಳದಲ್ಲಿ ಈ ಕೃತ್ಯ ಎಸಗಲಾಗಿದೆ. ಗೋಹತ್ಯೆ ವಿರೋಧಿ ಆಂದೋಲನದಲ್ಲಿ ಹಿಂದೂ ಹುಡುಗರ ಹತ್ಯೆಯಾಗುತ್ತಿರುವುದು ಖಂಡನೀಯ’ ಎಂದರು
.ಗೃಹಸಚಿವರು ಕೂಡಾ ಈ ಪ್ರಕರಣದ ಬಗ್ಗೆ ಮೌನ ವಹಿಸಿದ್ದಾರೆ. ಸೂಕ್ತ ಅಪರಾಧಿಗಳ ಬಂಧನವಾಗದೇ ಇದ್ದಲ್ಲಿ ಮೊನ್ನೆ ನಡೆದಂತೆ ಇನ್ನೊಮ್ಮೆ ಪರಿಸ್ಥಿತಿ ಕೈಮೀರಲಿದೆ.’ ಜಿಲ್ಲೆಯ ಶಾಸಕರು, ಸಚಿವರು ಮತ್ತು ಕಾಂಗ್ರೆಸ್ ಪುಢಾರಿಗಳು ಪ್ರಶಾಂತ್ ಹತ್ಯೆ ಮಾಡಿದ ಆರೋಪಿಗಳಿಗೆ ಬೆಂಗಾವಲಾಗಿ ಕೆಲಸ ಮಾಡುತ್ತಿರುವುದರಿಂದ ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ ಎಂದು ಆರೋಪಿಸಿದ ಅವರು .ಮೂಡುಬಿದಿರೆಯಲ್ಲಿರುವ ಸಚಿವ ತಾನೇ ಅಪರಾಧಿಯಾಗಿರುವುದರಿಂದ ಮೃತ ಪ್ರಶಾಂತ್ ಮನೆಗೆ ಭೇಟಿ ನೀಡದೇ ಪ್ರಕರಣದ ಆರೋಪಿಗಳಿಗೆ ಬೆಂಬಲವಾಗಿದ್ದಾರೆ. ಇದನ್ನು ನಾವು ಪ್ರಶಾಂತ್ ಪರ ನಡೆಸಲಿರುವ ಹೋರಾಟದಲ್ಲಿ ಜನರ ಮುಂದಿಡಲಿದ್ದೇವೆ’ ಎಂದವರು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆ. ಆದರೆ ಆಗಿನ ರಾಜ್ಯಪಾಲರ ಹಸ್ತಕ್ಷೇಪದಿಂದ ಅದು ಜಾರಿಗೆ ಬರಲಿಲ್ಲ. ಇನ್ನು ಮೂರು ವರ್ಷಗಳಲ್ಲಿ ನಮ್ಮದೇ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಆ ಸಂದರ್ಭ ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದೇವೆ.’ ಎಂದು ತಿಳಿಸಿದರು. .
ಈ ಸಂದರ್ಭ ಸಂಸದ ನಳಿನ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಕೆ.ಪಿ ಜಗದೀಶ ಅಧಿಕಾರಿ, ಪ್ರತಾಪ್ ಸಿಂಹ ನಾಯಕ್, ಭುವನಾಭಿರಾಮ ಉಡುಪ, ಕೃಷ್ಣರಾಜ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಪಿ ಸುಚರಿತ ಶೆಟ್ಟಿ, ಸುದರ್ಶನ್ ಎಂ, ಮೋನಪ್ಪ ಭಂಡಾರಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಆಯುರ್ ಆಶ್ರಮದ ಸಂತೋಷ್ ಗುರೂಜಿ ಮೃತರ ಹೆತ್ತವರಿಗೆ ಸಾಂತ್ವಾನ ನೀಡಿ ಮಾಧ್ಯಮದೊಂದಿಗೆ ಮಾತನಾಡಿ ಈ ದುರ್ಘಟನೆಯು ಅಖಂಡ ಭಾರತದಲ್ಲಿ ಹಿಂದುತ್ವಕ್ಕೆ ದೊಡ್ಡ ಹೊಡೆತ. ಬಹುಸಂಖ್ಯಾತರಿಗೆ ಬೆಲೆ ಸಿಗುತ್ತಿಲ್ಲ. ಕಾನೂನು ವ್ಯವಸ್ಥೆ ಸರಿಯಿಲ್ಲ. ಇದರಿಂದಾಗಿ ಸರಕಾರವೇ ಜನರಲ್ಲಿ ಉಗ್ರತ್ವವನ್ನು ಬೆಳೆಸುತ್ತಿದೆಯೋ ಏನೋ ಎಂಬ ಭಾವನೆ ಬಂದಿದೆ. ನಮ್ಮ ದೇಶ ಇನ್ನೊಂದು ಪಾಕಿಸ್ಥಾನ ಆಗಬಾರದು. ಮತ್ತು ಸಮಸ್ತ ಹಿಂದೂ ಧರ್ಮಕ್ಕೆ ನ್ಯಾಯ ಕೊಡುವಂತಹ ವ್ಯವಸ್ಥೆ ಆಗಬೇಕಾಗಿದೆ ಎಂದು ಹೇಳಿದರು.

 

By suddi9

Leave a Reply

Your email address will not be published. Required fields are marked *