ಶರನ್ನವರಾತ್ರಿ ಉತ್ಸವ ನಿಮಿತ್ತ ನೆರವೇರಿಸಲ್ಪಟ ಚಂಡಿಕಾಹೋಮ
ಮುಂಬಯಿ: ಸುಮಾರು ಏಳುವರೆ ದಶಕಗಳಿಂದ ಮುಂಬಯಿಯ ಕೋಟೆ (ವಿಟಿ) ಬೋರಾ ಬಜ್ಹಾರ್‍ನಲ್ಲಿ ಸೇವಾ ನಿರತ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರೀ ಸೇವಾ ಸಮಿತಿ ವಾರ್ಷಿಕವಾಗಿ ಆಚರಿಸುತ್ತಿರುವಂತೆ ಈ ಬಾರಿಯೂ ತಮ್ಮ ಮಂದಿರಲ್ಲಿ ಶರನ್ನವರಾತ್ರಿ ಉತ್ಸವವನ್ನು ವಿಜೃಂಭನೆಯಿಂದ ಆಚರಿಸುತ್ತಿದೆ. ಆ ಪ್ರಯುಕ್ತ ಇಂದಿಲ್ಲಿ ಮಂಗಳವಾರ ಚಂಡಿಕಾಹೋಮ, ಸಂಜೆ, ಗ್ರಂಥ ಪರಾಯಣ, ಭಜನೆ ಮಹಾಪೂಜೆ ಮತ್ತು ದೇವೀ ದರ್ಶನ, ಓಕುಳಿ ಅಭ್ಯಂಜನ ನೇರವೇರಿಸಲ್ಪಟ್ಟಿತು.

Shani Mahatma (V.T) Fort-1

Shani Mahatma (V.T) Fort-2

Shani Mahatma (V.T) Fort-3

Shani Mahatma (V.T) Fort-9

Shani Mahatma (V.T) Fort-A2

Shani Mahatma (V.T) Fort-B1
ಗೌರವಾಧ್ಯಕ್ಷ ಗಣೇಶ ಪಿ.ಸುವರ್ಣ, ಅಧ್ಯಕ್ಷ ಬಪ್ಪನಾಡು ಕೂಸಪ್ಪ, ಉಪಾಧ್ಯಕ್ಷರುಗಳಾದ ಪ್ರಭಾಕರ್ ಆರ್.ಸುವರ್ಣ ಮತ್ತು ದೇವದಾಸ್ ಉಚ್ಚಿಲ್, ಗೌ| ಪ್ರ| ಕಾರ್ಯದರ್ಶಿಚಂದ್ರಶೇಖರ್ ಶ್ರೀಯಾನ್, ಗೌ|ಕೋಶಾಧಿಕಾರಿ ಧರ್ಮಪಾಲ್ ಎನ್.ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸುಧಾಕರ್ ಉಚ್ಚಿಲ್ ಮತ್ತು ಜಯಂತಿ ಕಡಂದಲೆ ಉಪಸ್ಥಿತರಿದ್ದು, ಪುರೋಹಿತ ಹರೀಶ್ ಶಾಂತಿ ಹೆಜಮಾಡಿ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರೆವೇರಿಸಿದ್ದು, ಆರ್.ವಿ ಶೆಟ್ಟಿ ಮತ್ತುಸರೋಜಿನಿ ಆರ್.ಶೆಟ್ಟಿದಂಪತಿ ಪೂಜೆಗಳ ಸಹಭಾಗಿತ್ವ ವಹಿಸಿದ್ದರು. ವಿವಿಧ ಪೂಜಾಧಿಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬರುವ ಗುರುವಾರ ವಿಜಯ ದಶಮಿಯಂದು ಸಮಾಪನ ಗೊಳ್ಳಲಿದ್ದು, ಅಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ ಧಾರ್ಮಿಕ ಸಭಾಕಾರ್ಯಕ್ರಮ, ತದನಂತರ ಮಂಗಳಾರತಿ, ದೇವಿ ದರ್ಶನ, ನಂತರ ಸಾಲಾಂಕೃತ ದೇವಿ ಬಲಿ ಮೂರ್ತಿಯೊಂದಿಗೆ ವಿಜೃಂಭನೆಯ ಮೆರವಣಿಗೆಯಲ್ಲಿ ಮಂಗಳ ಸ್ನಾನಕ್ಕಾಗಿ ಚೌಪಟ್ಟಿಗೆ ತೆರಳಿ ಈ ವಾರ್ಷಿಕ ದಸರಾ ಮಹೋತ್ಸವವು ಸಂಪನ್ನ ಗೊಳ್ಳಲಿದೆ. ಮಹಾನಗರದ್ಲ್ಲಿನ ಸದ್ಭಕ್ತರೆಲ್ಲರೂ ತಮ್ಮ ಇಷ್ಟಬಂಧು ಮಿತ್ರರನ್ನೊಳಗೊಂಡು ಆಗಮಿಸಿ ಶ್ರೀ ತ್ರಿಭುವನೇಶ್ವರಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಅಧ್ಯಕ್ಷ ಬಪ್ಪನಾಡು ಕೂಸಪ್ಪತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *