ಬಂಟ್ವಾಳ: ವಿವಿಧ ನಾಗರಿಕ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಜೀಪಮೂಡ ಗ್ರಾಪಂ ಕಾರ್ಯಾಲಯದ ಮುಂಭಾಗ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ  ಆಫ್ ಇಂಡಿಯಾ ಸ್ಥಳೀಯ ಗ್ರಾಮ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಗ್ರಾಪಂ ವ್ಯಾಪ್ತಿಯ ಪ್ರಮುಖ 7 ಸಮಸ್ಯೆಗಳನ್ನು ಪರಿಹರಿಸದಿದ್ದರೆ 2 ವಾರಗಳೊಳಗೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಜೀಪಮೂಡ ಗ್ರಾಮ ಸಮಿತಿ ಅಧ್ಯಕ್ಷ ಝಕರಿಯಾ ಮಾಲಿಕ್ ಅವರು ಎಚ್ಚರಿಸಿದ್ದಾರೆ.

2. Sajipamuda 1 Sajipamuda
ಸಜೀಪಮೂಡ ಗ್ರಾಮದ ಎಲ್ಲಾ ವಾರ್ಡ್ಗಳ ಕಸ ವಿಲೇವಾರಿ, ಪಣೋಲಿಬೈಲು ಕ್ಷೇತ್ರ ವಠಾರದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಸಮಗ್ರ ಕುಡಿಯುವ ನೀರು ಯೋಜನೆ, ಒಳಚರಂಡಿ ಹಾಗೂ ವಿದ್ಯುತ್ ದೀಪ ಅಳವಡಿಕೆ, ಕರಿಂಗಾನ ಚರ್ಚ್ ದಾರಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ, ಕೊಳಕೆ ಮಹಿಯುದ್ದೀನ್ ಜುಮಾ ಮಸೀದಿ ವಠಾರಕ್ಕೆ ಇಂಟರ್ಲಾಕ್ ಅಳವಡಿಕೆ, ಬೊಳ್ಳಾಯಿ ನ್ಯಾಯಬೆಲೆ ಅಂಗಡಿ ಪರವಾನಿಗಿ ರದ್ದು ಪಡಿಸಬೇಕು, ಗ್ರಾಪಂ ಆಡಳಿತ ಹಾಗೂ ನಿರ್ವಹಣೆಯಲ್ಲಿ ಜನಸ್ನೇಹಿಗೊಳಿಸಬೇಕು ಎಂದು ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಒತ್ತಾಯಿಸಿದರು.
ಪ್ರತಿಭಟನಾ ಸಭೆಯ ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಾಹುಲ್ ಎಸ್.ಎಚ್, ನರಿಂಗಾನ ಗ್ರಾಪಂ ನವಾಜ್ ನರಿಂಗಾನ, ಸಜೀಪಮುನ್ನೂರು ಗ್ರಾಪಂ ಸದಸ್ಯ ಹಂಝ ನಂದಾವರ, ಪ್ರಮುಖರಾದ ಇಸ್ಮಾಯಿಲ್ ಬಾವ, ಅಬ್ದುಲ್ ರವೂಫ್ ಕೊಳಕೆ, ಕರಿಯಂಗಳ ಗ್ರಾ.ಪಂ ಸದಸ್ಯ ನವಾಜ್  ಮತ್ತಿತರು ಪಾಲ್ಗೊಂಡರು. ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ನಗರ ಠಾಣಾಧಿಕಾರಿ ನಂದಕುಮಾರ್ ಅವರು ಬಂದೋಬಸ್ತ್ ಏರ್ಪಡಿಸಿದ್ದರು.

By suddi9

Leave a Reply

Your email address will not be published. Required fields are marked *