ಬಂಟ್ವಾಳ; ಅಂದು ಆಧಿತ್ಯವಾರ ಬೆಳಿಗ್ಗೆ ಸುಮಾರು 10ಗಂಟೆ ಸಮಯ ಸಮಾರಿಗೆ ಹಳೆಯ ತಾಲೂಕು ಕಚೇರಿ ಅವರಣದಲ್ಲಿ ಅಪರಿಚಿತ ಐದು ಮಂದಿ ಜಗುಲಿಯಲ್ಲಿ ಕುಳಿತು ಏನೋ ಗಹನವಾದ ಅಲೋಚನೆಯಲ್ಲಿ ಕುಳಿತತ್ತಿದ್ದರೋ ಅಥವಾ ಜುಗಾರಿ ಆಡುತ್ತಿದ್ದರೋ ಏನೋ ಗೊತ್ತಾಗುತ್ತಿರಲಿಲ್ಲ ಹತ್ತಿರ ಹೋಗಿ ನೋಡಿದಾಗ ಅವರು ಜ್ಯೋತಿಷ್ಯದ ಕವಡೆ ಕಾಯಿ ಹಾಕಿ ಏನೋ ಗುಣುಗುಗುಟ್ಟುತ್ತಿದ್ದರು. ಗುರು-ಐವರು ಶಿಷ್ಯರು ವೃತ್ತಾಕಾರದಲಿ ಕುಳಿತು ಮಾತಲ್ಲಿ ತೊಡಗಿದ್ದರೆ..! ಅದನ್ನು ನೋಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.
DSC_9416
ಅಲ್ಲೇನಿತ್ತು..?
ಮಧ್ಯದಲ್ಲಿ ಕವಡೆಯನ್ನು ಹಾಕಿ ಕುಳಿತ್ತಿದ್ದ ಅವರೆಲ್ಲಾ ಯಾವುಗೋ ಗಹನವಾದ ವಿಷಯವನ್ನು ಚರ್ಚಿಸುತ್ತಿದ್ದರು. ನಾಡಕಚೇರಿ, ಸಮಾಜಕಲ್ಯಾಣ ಇಲಾಖೆ, ಆಧಾರ್ ಕೇಂದ್ರ, ಚುನಾವಣಾ ಶಾಖೆ, ಪಡಿತರ ಕಛೇರಿ, ನವಚೇತನಾ ಸೇವಾಟ್ರಸ್ಟ್, ಬಂಟ್ವಾಳ ಪ್ರೆಸ್ ಕ್ಲಬ್ ಹೀಗೆ ಆರೇಳು ಮುಖ್ಯ ಕಛೇರಿ ಹೊಂದಿರುವ ತಾ.ಪಂ. ಹಳೆ ಕಟ್ಟಡ ಆದಿನ ರಜಾ ದಿನವಾದ್ದರಿಂದ ಬಿಕೋ ಎನ್ನುತ್ತಿತ್ತು. ಆ ಕಾರಣದಿಂದಲೇ ಆ ಸ್ಥಳ ಶುಚಿಯಾಗಿಲ್ಲದಿದ್ದರೂ , ಆ ಆರು ಮಂದಿ ಅಲ್ಲೇ ಕುಳಿತ್ತಿದ್ದರು.

ಅಂಗಿ,ಪಂಚೆ ಮತ್ತು ಹೆಗಲಿಗೆ ಟವೆಲ್ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬರು ಮಧ್ಯದಲ್ಲಿ ಕುಳಿತುಕೊಂಡು ಕವಡೆ ಶಾಸ್ತ್ರದ ವಿವರಗಳನ್ನು ಹೇಳುತ್ತಿದ್ದರೆ. ಸುತ್ತಲೂ ಕುಳಿತ್ತಿದ್ದ ಐವರು ತಮ್ಮ ವಾದ ಮಂಡಿಸುತ್ತಿದ್ದರು.
ಜ್ಯೋತಿಷ್ಯ ಕಲಿಕೆಯಂತೆ..!
ಸಂಶಯ ಬರುವಂತಾ ರೀತಿಯಲ್ಲಿ ಕುಳಿತ್ತಿದ್ದವರನ್ನು ದೂರದಿಂದ ಕಂಡವರೆಲ್ಲಾ, ಇಸ್ಪೀಟು ಆಟದಲ್ಲಿ ನಿರತರಾಗಿದ್ದಾರೆ ಎಂದು ಸುದ್ದಿಮಾಡಿದ್ದರು.ಆದರೆ ಹತ್ತಿರ ಹೋದ ಬಳಿಕ ತಿಳಿದದ್ದು ಅಲ್ಲಿ ಕವಡೆ ಹಾಕಿ ಮಾತನಾಡುತ್ತಿದ್ದರೆಂಬುದು. ಅಲ್ಲೇ ಕುಳಿತ್ತಿದ್ದವರನ್ನು ಕರೆದು ಕೇಳಿದರೆ, ಜ್ಯೋತಿಷ್ಯ ಕಲಿಸುತ್ತಿದ್ದೇವೆ , ಇಬ್ಬರು ಕೇರಳದವರು, ಒಬ್ಬರು ಕಾಸರಗೋಡು, ಮಂಗಳೂರು ವಿಟ್ಲ ದವರು ಮತ್ತೆಲ್ಲಾ ಲೋಕಲ್ ಎಂದು ಪ್ರತಿಕ್ರಿಯಿಸಿದರು. ಇದು ಸಕರ್ಾರಿ ಕಟ್ಟಡವಲ್ಲವೇ, ಅನುಮತಿ ಪಡೆದಿದ್ದೀರಾ, ಅಷ್ಟಕ್ಕೂ ಇದು ಯೋಗ್ಯ ಸ್ಥಳವಾ ಎಂದು ಪ್ರಶ್ನಿಸಿದರೆ, ಹಾಗಾದ್ರೆ ಮುಂದಿನಸಲ ಬರುವುದಿಲ್ಲ ಎಂದರು. ಈ ಹಿಂದೆ ಬಂದಿದ್ದೀರಾ ಎಂದು ಕೇಳಿದರೆ, 2 ತಿಂಗಳ ಹಿಂದೆ ಬಂದಿದ್ದೆವು ಎಂದು ಉತ್ತರಿಸಿದರು.

ವಾಮಾಚಾರ ಶಂಕೆ..
ಸರ್ಕಾರಿ ಕಟ್ಟಡದಲ್ಲಿ , ರಜಾ ದಿನದಂದು ಅಪರಿಚಿತರು, ಅಪರಿಚಿತ ಸ್ಥಳದಲ್ಲಿ ಒಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಹಕುಂಡಲಿ ಹಾಕಿ, ಅದರಲ್ಲಿ ಕವಡೆಇಟ್ಟು ಗ್ರಹ ಹಾಗೂ ಗ್ರಹಚಾರ ಲೆಕ್ಕಾ ಚಾರ ಹಾಕಿಕೊಳ್ಳುತ್ತಿದ್ದುದು ಮತ್ತೊಬ್ಬರಿಗೆ ಅಪಾಯ ತರುವ ವಾಮಾಚಾರ ನಡೆಸುತ್ತಿದ್ದರೆ, ಅಥವಾ ಅಂತಹಾ ಶಕ್ತಿಯ ಹುಡುಕಾಟ ನಡೆಸುತ್ತಿದ್ದರೇ ಎಂಬ ಅನುಮಾನ ಮೂಡಿದೆ. ಜೊತೆಗೆ ನಿಜವಾದ ಜ್ಯೋತಿಷ್ಟಯ ಕಲಿಕೆಯಾಗಿದ್ದರೆ ಸ್ವಚ್ಛತೆಇಲ್ಲದ ಆ ಪರಿಸರವನ್ನೇಕೆ ಆಯ್ಕೆ ಮಾಡಿದರು, ಕಸದ ರಾಶಿಯ ಪಕ್ಕದಲ್ಲೇ ಏಕೆ ಗ್ರಹಕುಂಡಲಿ ಹಾಕಿದರು, ಕುಂಡಲಿ ಎದುರು ಕ್ರಮಬದ್ದವಾಗಿ ಕುಳಿತು ಕೊಳ್ಳಬೇಕಾದವರು ಪ್ಯಾಂಟ್ ಶರ್ಟ್ ಅಂಗಿ ಧರಿಸಿಕೊಂಡು, ರಟ್ಟಿನ ಮೇಲೆ ನಿಯಮತಪ್ಪಿ ಏಕೆ ಕುಳಿತರು ಎನ್ನುವ ಎಂಬ ಪ್ರಶ್ನೆಗಳನ್ನು ಮೂಡಿಸಿದೆ.
ಪೊಲೀಸರು ಓಡಿಸಿದರು.

ಸರ್ಕಾರಿ ಕಟ್ಟಡವೊಂದರ ಆವರಣದಲ್ಲಿ ಗ್ರಹಕುಂಡಲಿ ಹಾಕಿ ಕುಳಿತವರ ಬಗ್ಗೆ ಅನುಮಾನಗೊಂಡವರು ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು ಅವರ ಕಾರ್ಯವೈಖರಿ ಬಗ್ಗೆ ವಿಚಾರಿಸದೆ, ಸ್ಥಳದಿಂದ ತೆರಳುವಂತೆ ಸೂಚಿಸಿದರು. ತಕ್ಷಣವೇ ಅವರಲ್ಲರೂ ಅಲ್ಲಿಂದ ತೆರಳಿದರು.ಒಟ್ಟಿನಲ್ಲಿ ಜ್ಯೋತಿಷ್ಯಶಾಸ್ತ್ರ ಕ್ಕೆ ಇರುವಂತಹಾ ಗೌರವಕ್ಕೆ ಧಕ್ಕೆ ತರುವಂತಹಾ ರೀತಿಯಲ್ಲಿ ಈ ಘಟನೆ ನಡೆದಿದೆ ಎಂದರೆ ತಪ್ಪಾಗಲಾರದು.

ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶಿಷ್ಟ ಗೌರವವಿದೆ.ಅದರ ಕಲಿಕೆಗೂ -ಕಲಿಸುವಿಕೆಗೂ ಅದರದ್ದೇ ಆದ ಯೋಗ್ಯವಾದ ಸ್ಥಳಬೇಕು.ಪರಿಸರ ಶುಚಿಯ ಜೊತೆಯಲ್ಲಿ ವಸ್ತ್ರದಮಡಿವಂತಿಕೆಯೂ ಅಗತ್ಯ ,ಮಾನಸಿಕವಾಗಿಯೂ ಏಕಾಗ್ರತೆ ಬೇಕು.
ಚಂದ್ರಶೇಖರ ಆಚಾರ್ಯ
ಜ್ಯೋತಿಷ್ಯ ವಿದ್ಯಾರ್ಥಿ

ದೂರು ಬಂದಾಕ್ಷಣ ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ, ಅವರನ್ನು ಸ್ಥಳದಿಂದ ಕಳುಹಿಸಲಾಗಿದೆ. ಕೇರಳ, ಮಂಗಳೂರು, ವಿಟ್ಲ ಹಾಗೂ ಸ್ಥಳೀಯ ನಿವಾಸಿಗಳು ಆ ತಂಡದಲ್ಲಿದ್ದ ಬಗ್ಗೆ ಮಾಹಿತಿ ಇದೆ, ಮತ್ತೊಮ್ಮೆ ಇಂತಹಾ ಚಟುವಟಿಕೆ ಕಂಡುಬಂದಲ್ಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು.
.ನಂದಕುಮಾರ್
ಉಪನಿರೀಕ್ಷಕ
ಬಂಟ್ವಾಳ ನಗರ ಠಾಣೆ

By suddi9

Leave a Reply

Your email address will not be published. Required fields are marked *