ಮೂಡುಬಿದರೆ: ಜಾಗದ ಕೊರತೆಯ ನೆಪವೊಡ್ಡಿ ಮೂಡುಬಿದರೆಯಲ್ಲಿ ಬಡವರಿಗೆ ಮನೆ ನಿವೇಶನಕ್ಕೆ ಜಾಗ ಒದಗಿಸದಿರುವುದು ಸರಿಯಲ್ಲ. ಇಲ್ಲಿನ ಶಾಸಕರಿಗೆ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿಯಿದ್ದರೆ ನಿಡ್ಡೋಡಿಯಲ್ಲಿರುವ 200 ಎಕರೆ ಸರ್ಕಾರಿ ಸ್ಥಳವನ್ನು ಮನೆ ನಿವೇಶನಕ್ಕೆ ಕಾದಿರಿಸಬೇಕು. ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು, 94ಸಿ ಯಲ್ಲಿ ಮನೆ ಅಡಿ ಸ್ಥಳ ಮಾತ್ರವಲ್ಲದೆ 9 ಸೆಂಟ್ಸು ವರೆಗೂ ಕೊಡಲು ಹೆಚ್ಚಿನ ಆಧ್ಯತೆ ಕೊಡಬೇಕು ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ. ಯಾದವ ಶೆಟ್ಟಿ ಒತ್ತಾಯಿಸಿದರು.
mbd_nov5_2
ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಮನೆ ಎದುರು ಸಿಪಿಐ(ಎಂ)ನಿಂದ ಬೃಹತ್ ಪ್ರತಿಭಟನೆ ಪೂರಕವಾಗಿ ಮೂಡುಬಿದರೆ ತಹಸೀಲ್ದಾರ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಮೂಡುಬಿದರೆ ಸಿಪಿಐ(ಎಂ) ಜಲ್ಲಾ ಸಮಿತಿ ಸದಸ್ಯೆ ರಮಣಿ ಮಾತನಾಡಿ 2015-16ರ ಸಾಲಿನ ಬೀಡಿ ಕಾರ್ಮಿಕರ ತುಟಿಭತ್ಯೆಯನ್ನು ತಡೆಹಿಡಿದಿರುವುದು ಖಂಡನೀಯ. ಕಾರ್ಮಿಕ ಸಚಿವರು ಕಂಪೆನಿಗಳ ಮಾಲೀಕರ ಪರವಾದ ಧೋರಣೆಯನ್ನು ಬಿಟ್ಟು, ಕಾರ್ಮಿಕರಿಗೆ ಅನುಕೂಲವಾಗುವಂತೆ ನಿಯಮ ರೂಪಿಸಬೇಕು ಎಂದರು.
ಕಾರ್ಮಿಕ ಮುಖಂಡರಾದ ಸುಂದರ ಶೆಟ್ಟಿ, ಲಕ್ಷ್ಮಿ, ರಾಧಾ, ಶಂಕರ ವಾಲ್ಪಾಡಿ, ಗಿರಿಜ, ಸೀತಾರಾಮ ಶೆಟ್ಟಿ, ಶಂಕರ ವಾಲ್ಪಾಡಿ, ಕೃಷ್ಣಪ್ಪ, ರಿಯಾಜ ಮೊದಲಾದವರು ವಹಿಸಿದ್ದರು.
ಹಳೆ ಪೊಲೀಸ್ ಠಾಣೆ ಬಳಿಯಿಂದ ಮೂಡುಬಿದರೆ ನಾಡ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಸಭೆಯ ಬಳಿಕ ಮೂಡುಬಿದರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಅವರಿಗೆ ಮನವಿ ಸಲ್ಲಿಸಲಾಯಿತು.
.
ಬಹಿರಂಗ ಚರ್ಚೆಗೆ ಆಹ್ವಾನ:
ಎತ್ತಿನಹೊಳೆ ಯೋಜನೆಯನ್ನು ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರೇ ರೂಪಿಸಿದ್ದು, ಜನರ ಎದುರಿನಲ್ಲಿ ಅದನ್ನು ವಿರೋಧಿಸುವ ನಾಟಕವಾಡುತ್ತಿದ್ದಾರೆ. ಲವ್ಜಿಹಾದ್ನಂತಹ ಪ್ರಕರಣಗಳು ರಾಜಕೀಯಕ್ಕೆ ಅಸ್ತ್ರವಾಗಿದೆ. ಕೋಮುಗಲಭೆಯನ್ನು ಸೃಷ್ಠಿಸುವ ಹುನ್ನಾರಗಳೂ ಕೂಡ ನಿರಂತರವಾಗಿದೆ. ಕಾಂಗ್ರೆಸ್, ಬಿಜೆಪಿಯ ಜನವಿರೋಧಿ ನೀತಿಗಳನ್ನು ಜನರ ಮುಂದಿಡಲು ಬಹಿರಂಗ ಚರ್ಚೆಯಾಗಬೇಕು. ಅದರಲ್ಲಿ ಮೂಡುಬಿದರೆ ಪ್ರಮುಖರು ಹಾಗೂ ಎಲ್ಲ ಪಕ್ಷದ ಮುಖಂಡರು ಭಾಗವಹಿಸಬೇಕು. ಈ ಮೂಲಕ ಸಿಪಿಐ(ಎಂ) ಜನವಿರೋಧಿ ನಾಯಕರ ಬಣ್ಣ ಬಯಲು ಮಾ ಡಲು ಸಿದ್ಧವಿದೆ ಎಂದು ಯಾದವ ಶೆಟ್ಟಿ ತಿಳಿಸಿದರು.

By suddi9

Leave a Reply

Your email address will not be published. Required fields are marked *