ಬಂಟ್ವಾಳ: ಜಮೀನಿನ ಗಡಿ ಸಮಸ್ಯೆಗಳಿದ್ದಲ್ಲಿ ಅದನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಪೋಡಿ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರೆಲ್ಲಾ ಈ ಅಭಿಯಾನದ ಸದುಪಯೋಗ ಪಡೆಯುವುದರೊಂದಿಗೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅಮ್ಟಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಹೇಳಿದರು.
BTW_NOV6_1
ಅಮ್ಟಾಡಿ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಕುರಿಯಾಳ ಗ್ರಾಮ ಪೋಡಿ ಮುಕ್ತ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಮೀನು ಸರ್ವೆಯ ವೇಳೆ ಗಡಿಗುರುತು ಕಲ್ಲುಗಳನ್ನು ಹುಡುಕುವುದೇ ಸವಾಲಿನ ಕೆಲಸ. ಗ್ರಾಮಸ್ಥರು ತಮ್ಮ ಜಮೀನಿನ ಅಳತೆಗೆ ಅಧಿಕಾರಿಗಳು ಬಂದಾಗ ಈ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಅವರು ಮನವಿ ಮಾಡಿಕೊಂಡರು.
ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ ಶ್ರೀನಿವಾಸ್, ತಹಸೀಲ್ದಾರ್ ಪುರಂದರ ಹೆಗ್ಡೆ ಪೋಡಿ ಮುಕ್ತ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ, ತಾ.ಪಂ.ಸದಸ್ಯ ಎಫ್ರಂ ಸಿಕ್ವೇರಾ, ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ ಮೇಗಿನ ಕೂರಿಯಾಳ, ಸದಸ್ಯೆ ಚೇತನಾ, ಧರ್ಮಣ ಬಂಗೇರಾ, ಪಿಡಿಓ ಮಹಮ್ಮದ್, ಕುರಿಯಾಳ ಲೆಕ್ಕಾಧಿಕಾರಿ ಶಿಲ್ಪ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *