ಮುಂಬಯಿ, ನ.06: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗೋವಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಇವುಗಳ ಸಹಯೋಗದಲ್ಲಿ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಫೌಂಡೇಶನ್ ಇದರ ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಆಯೋಜಿಸಿರುವ ವಿಶ್ವಕೊಂಕಣಿ ಸಾಹಿತ್ಯ ಸಮಾರೋಹ ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಆಯೋಜಿಸಿರುವ ವಾರ್ಷಿಕ `ವಿಶ್ವ ಕೊಂಕಣಿ ಪುರಸ್ಕಾರ’ ಸಮಾರಂಭವು ಇಂದಿಲ್ಲಿ ಮಂಗಳೂರುನ ಶ್ರೀ ಟಿ.ವಿ ರಮಣ್ ಪೈ ಸಭಾಗೃಹದಲ್ಲಿ ನೇರವೇರಿತು.

Basti Award Pics-13

 

Basti Award Pics-14

 

Basti Award Pics-25


Basti Award Pics-7

 

Basti Award Pics-24

Basti Award Pics-21

Basti Award Pics-17

Basti Award Pics-16

Basti Award Pics-15

Basti Award Pics-20

Basti Award Pics-23

ಸೆಂಟರ್ ಫಾರ್ ಎನ್ಡೇಂಜರ್ಡ್ ಲ್ಯಾಂಗ್ವೇಜಸ್, ವಿಶ್ವಭಾರತಿ ಶಾಂತಿನಿಕೇತನ್ ಇದರ ಕಾರ್ಯಾಧ್ಯಕ್ಷ ಡಾ| ಉದಯ ನಾರಾಯಣ ಸಿಂಗ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಸಂಸ್ಥೆಯ ಕಾರ್ಯಧ್ಯಕ್ಷ ಟಿ.ವಿ ಮೋಹನದಾಸ ಪೈ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು, ಶೈಕ್ಷಣಿಕ ರಂಗದ ಅನುಕರಣೀಯ ಸೇವೆಗಾಗಿ ಕೊಡಮಾಡಿದ `ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ-2015’ನ್ನು ರಾಯನ್ ಇಂಟರ್ನ್ಯಾಷನಲ್ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ (ಮಹಿಳಾ ವಿಭಾಗ) ಹಾಗೂ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ್ ಅಡಳಿತಾಧಿಕಾರಿ ಮತ್ತು ರಂಗಭೂಮಿ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ| ಹೆಚ್.ಶಾಂತಾರಾಮ ಮಣಿಪಾಲ (ಪುರುಷರ ವಿಭಾಗ) ಅವರಿಗೆ ಡಾ| ಉದಯ ನಾರಾಯಣ ಸಿಂಗ್ ಅವರು ಪ್ರದಾನಿಸಿ ಗೌರವಿಸಿದರು. ವಿಮಲಾ ವಿ.ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು ಕಾವ್ಯ ಪುರಸ್ಕಾರ ಹಾಗೂ ಜೀವಮಾನದ ಸಾಧನಾ ಪುರಸ್ಕಾರ-2015ನ್ನು ಕ್ರಮವಾಗಿ ಶ್ರೀಮತಿ ಮೀನಾ ಕಾಕೋಡ್ಕರ್ ಮತ್ತು ಆಂಡ್ರ್ಯೊ      ಎಲ್.ಡಿ’ಕುನ್ಹಾ ಹಾಗೂ ಸುರೇಶ್ ಜಿ.ಅಮೋಣ್ಕರ್ (ಕೊಂಕಣಿ ಭಾಷಾ ಚಳವಳಿ ಸೇವೆಗಾಗಿ) ಅವರಿಗೆ ಪ್ರದಾನಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರ (ವಿಕೊಕೆ) ಅಧ್ಯಕ್ಷ ಬಸ್ತಿ ವಾಮನ ಶೆಣೈ,ವಿಶ್ವ ವಿಕೊಕೆ ಉಪಾಧ್ಯಕ್ಷರುಗಳಾದ ಅಲೆನ್ ಸಿ.ಎ ಪಿರೇರಾ ಮತ್ತು ವೆಂಕಟೇಶ್ ಎನ್. ಬಾಳಿಗಾ, ಕಾರ್ಯದರ್ಶಿಗಳಾದ ಬಿ. ಪ್ರಭಾಕರ ಪ್ರಭು ಮತ್ತು ನರೇಶ್ ಆರ್.ಕಿಣಿ, ರಾಯನ್ ಇಂಟರ್ನ್ಯಾಷನಲ್ ಶೈಕ್ಷಣಿಕ ಸಮೂಹದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಯನ್ ಪಿಂಟೋ, ಸ್ಮಿತಾ ಜಯದೀಪ್ ಶೆಣೈ, ಪಾಲ್ಯ ಗಾಂವ್ಕರ್, ಪುರಸ್ಕಾರ ತೀರ್ಪುಗಾರ ಸಮಿತಿ ಮುಖ್ಯಸ್ಥ ಸಿ.ಎಂ.ಕಾಮತ್ ಅವರು ಉಪಸ್ಥಿತರಿದ್ದರು.

ಚಿತ್ರ ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *