ಬಜಪೆ :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪ್ರವರ್ತಿತ ಆರೂ ದಶಾವತಾರ ಮೇಳಗಳ ತಿರುಗಾಟ ಪ್ರಾರಂಭದ ಪೂರ್ವಭಾವಿಯಗಿ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಸೇವೆಯಾಟ ಬುಧುವಾರ ಜರಗಿತು.
ದೇವಳದ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಹಾಗೂ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಧಾರ್ಮಿಕ ವಿಧಿಗಳು ದೇವಳದಲ್ಲಿ ಜರಗಿದವು.

ಗೆಜ್ಜೆ ಪ್ರದಾನ ನಾಟ್ಯಸೇವೆ.
ಎಲ್ಲಾ ಅರೂ ಮೇಳಗಳ ಭಾಗವತರು ಪ್ರತ್ಯೇಕ ಪ್ರತ್ಯೇಕವಾಗಿ ಶ್ರೀ ದೇವರ ಎದುರು ಆರಂಭದಲ್ಲಿ ಹಿಮ್ಮೇಳ ಸಹಿತ ಭಾಗವತಿಕೆ ನಡೆಸುವುದು ಪದ್ಧತಿ ಇದನ್ನು *ತಾಳ ಮದ್ಧಳೆ* ಎಂದು ಹೇಳಲಾಗುತ್ತದೆ ಬಳಿಕ ಮೇಳದ ಪರಿಕರಗಳಿಗೆ ಪೂಜೆ.
ಬಳಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಆರೂ ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳಿಗೆ ಗೆಜ್ಜೆ ಪ್ರದಾನ ಮಾಡಿದ ಬಳಿಕ ಗೆಜ್ಜೆ ಕಟ್ಟಿ ಭಾಗವತರ ಸ್ತುತಿ ಪದ್ಯ ಚೆಂಡೆ-ಮದ್ಧಳೆ ಗಂಟೆ ಸಂಗೀತದ ಹಿಮ್ಮೇಳದೊಂದಿಗೆ ಯಕ್ಷನಾಟ್ಯ ಸೇವೆ ನಂತರ ಪ್ರದಕ್ಷಿಣೆಎ ಗಣಪತಿ ಸನ್ನಿಯೆದುರು ನಾಟ್ಯ ನಂತರ ಪ್ರದಕ್ಷಿಣೆ ಬಳಿಕ ಸರಸ್ವತೀ ಸದನದ ವೇದಿಕೆಯಲ್ಲಿ ಅಲಂಕೃತ ಮಂಟಪದಲ್ಲಿ ಆರೂ ಮೇಳಗಳ ದೇವರ ಚೌಕಿ ಪೂಜೆ ನಡೆಯಿತು. ಪ್ರಸಾದ ವಿತರಣೆಯ ಬಳಿಕ ರಥಬೀದಿಯಲ್ಲಿ ವಿದ್ಯುದ್ದೀಪಗಳಿಂದ ಭವ್ಯವಾಗಿ ಅಲಂಕೃತ ಆರೂ ರಂಗಸ್ಥಳಗಳಲ್ಲಿ ದೇವರ ಪೂಜೆ ನಡೆಯಿತು.
ನಂತರ ಏಕಕಾಲದಲ್ಲಿ ಆರೂ ರಂಗಸ್ಥಳಗಳಲ್ಲಿ ಯಕ್ಷಗಾನ ಪ್ರಾರಂಭವಾಗುತ್ತದೆ. ಬಳಿಕ *ಪಾಂಡವಾಶ್ವಮೇಧ* ಪ್ರಸಂಗ ಪ್ರದರ್ಶನ.
ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಅರ್ಚಕರಾದ ವೆಂಕಟರಮಣ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಶ್ರೀಹರಿನಾರಾಯಣದಾಸ ಅಸ್ರಣ್ಣ, ಆಡಳಿತಾಕಾರಿ ನಿಂಗಯ್ಯ, ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಯಕ್ಷಧರ್ಮ ಬೋನೀ ಚಾರಿಟೇಬಲ ಟ್ರಸ್ಟ್ನ ಪದಾಕಾರಿಗಳು, ಸೇವಾಕರ್ತರುಗಳು ಉಪಸ್ಥಿತರಿದ್ಧರು.




