ಬಂಟ್ವಾಳ: ನಾವೂರು ಗ್ರಾಮದ ಹಳೆಗೇಟು ಬಳಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಹತ್ಯೆಯಾದ ಹರೀಶ್ ಪೂಜಾರಿಯ ಮನೆಗೆ ಬುಧವಾರ ಸಂಜೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವ ಹೇಳುವುದರ ಜೊತೆಗೆ 1.15ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನೀಡಿದರು.
BTW_NOV18_2ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಸುದ್ದಿಗಾರರೊಂದಿಗೆ ಮಾತನಾಡಿ ಅಮಾಯಕ ಯುವಕನ್ನು ಕೊಲೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಿ ಬಂಧಿಸಿ, ಕಠಿಣವಾದ ಕಾನೂನು ಕ್ರಮ ಕೈಗೊಳ್ಳುವಂತೆ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಒತ್ತಾಯಿಸಲಾಗಿದೆ. ಅಮಾನವೀಯ ಕೃತ್ಯ ಎಸಗಿರುವ ಪಾತಕಿಗಳನ್ನು ಪೊಲೀಸ್ ಇಲಾಖೆ ರಾಜಕೀಯ ಹಸ್ತಕ್ಷೇಪವಿಲ್ಲದೆ ಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಮುಂದೆ ಇಂತಹ ದಾಳಿ ನಡೆಯದಂತೆ ಹಾಗೂ ಪೊಲೀಸ್ ಇಲಾಖೆ ಮಾದರಿಯಾಗಿ ತನ್ನ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಉಪಾಧ್ಯಕ್ಷ ರಾಘವ ಅಮೀನ್, ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್, ಕೋಶಾಧಿಕಾರಿ ಮಹಾಬಲ ಬಂಗೇರಾ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಬಿ.ವಿಶ್ವನಾಥ ಗಣೇಶ್ ಟಯರ್ಸ್, ದಾಮೋದರ ಸಾಲ್ಯಾನ್, ರಾಮಪ್ಪ ಪೂಜಾರಿ, ಉಮೇಶ್ ಸುವರ್ಣ ತುಂಬೆ, ಸುರೇಂದ್ರ ಅಮೀನ್, ಜಯಪ್ರಕಾಶ್ ಜೆ.ಎಸ್., ನ್ಯಾಯವಾದಿ ಸತೀಶ್, ರಾಜೇಶ್ ಸುವರ್ಣ, ಹರೀಶ್ ನರಿಕೊಂಬು, ಪ್ರಭಾಕರ ಮದ್ವ, ಕೆ.ಸಂಜೀವ ಪೂಜಾರಿ ಗುರುಕೃಪ, ಮುತ್ತಪ್ಪ ಪೂಜಾರಿ ಚಂಡ್ತಿಮಾರ್, ಹೇಮಂತ ಜಕ್ರಿಬೆಟ್ಟು, ಲೋಲಾಕ್ಷಿ, ಜಯಂತಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *